ಉತ್ತಮ ಯೋಜನೆ ಹೊಂದಿರುವ ಅರ್ಹ ಯುವ ಉದ್ಯಮಿಗಳಿಗೆ ಸುವರ್ಣವಕಾಶ; ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ ಯುಎಈ ಘಟಕದಿಂದ ಬಂಡವಾಳ ಹೂಡಿಕೆ ಮಾಡುವ ವೇದಿಕೆ ಸಿದ್ಧ- ಎನ್.ಎಂ.ಸಿ ನ್ಯೂಸ್

ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ (ಬಿಸಿಸಿಐ) ಯುಎಈ ಘಟಕ ಉದ್ಯಮ ಕ್ಷೇತ್ರಕ್ಕೆ ಇಳಿಯುವ ಯುವ ಉದ್ಯಮಿಗಳ ಅರ್ಹ ಸ್ಟಾರ್ಟಪ್ ಕಂಪೆನಿ ಅಥವಾ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗೆ (ಎಸ್.ಎಮ್.ಇ) ಬಂಡವಾಳ ಹೂಡಿಕೆಯ ವೇದಿಕೆ ಒದಗಿಸಲು ಉದ್ದೇಶಿಸಿದ್ದು, ಉತ್ತಮ ಯೋಜನೆ ಹೊಂದಿರುವ ಅರ್ಹ ಯುವ ಉದ್ಯಮಿಗಳಿಗೆ ಸುವರ್ಣವಕಾಶ ಇದಾಗಿದೆ.

ದುಬೈನ ಅಲ್-ಬರ್ಷಾದಲ್ಲಿರುವ ಹಾಲಿಡೇ ಇನ್ ಹೋಟೇಲಿನಲ್ಲಿ ನಡೆದ ಬಿಸಿಸಿಐ ಯುಎಈ ಕಾರ್ಯಕಾರಿಣಿ ಸಮಿತಿಯ ಸಭೆಯ ನಂತರ ಮಾತನಾಡಿದ ಅಧ್ಯಕ್ಷರಾದ ಎಸ್ ಎಂ ಬಶೀರ್, ‘ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯುವ ಪ್ರತಿಭೆಗಳ ಕೆಲ ಅತ್ಯುತ್ತಮ ಸ್ಟಾರ್ಟಪ್ ಕಂಪೆನಿಗಳು ಸಣ್ಣ ಬಂಡವಾಳದೊAದಿಗೆ ಉನ್ನತ ಮಟ್ಟಕ್ಕೇರಿ ಅಂತರಾಷ್ಟ್ರೀಯ ಮಟ್ಟದಲ್ಲೂ ಹೆಸರುವಾಸಿಯಾಗಿ ಹಲವಾರು ಯುವಉದ್ಯಮಿಗಳನ್ನು ಸೃಷ್ಟಿಸಿ ಅವರ ಮೂಲಕ ನೂರಾರು ಜನರಿಗೆ ಉದ್ಯೋಗ ಪಡೆಯಲು ಕಾರಣವಾಗಿದ್ದು, ಉದ್ಯಮ ಜಗತ್ತಿನಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿದೆ.

ಆದರೆ ಅದೆಷ್ಟೋ ಯುವ ಪ್ರತಿಭೆಗಳ ಬಳಿ ಯೋಜನೆಗಳಿದ್ದರೂ ಪ್ರಾರಂಭಿಕ ಬಂಡವಾಳ ಹೂಡುವವರಿಲ್ಲದೆ ಅವಕಾಶವಂಚಿತರಾಗಿದ್ದು ಅಂತಹ ಕೆಲವು ಅರ್ಹ ಸ್ಟಾರ್ಟಪ್ ಕಂಪೆನಿ ಅಥವಾ ಸಣ್ಣ ಮತ್ತು ಮಧ್ಯಮ ಕೈಗಾರಿಕೆ (ಎಸ್.ಎಮ್.ಇ) ಯೋಜನೆಗೆ ಅನಿವಾಸಿ ಭಾರತೀಯರಿಂದ ಬಂಡವಾಳ ಹೂಡಿಕೆ ಮಾಡುವ ವೇದಿಕೆ ನೀಡಲು ಬಿಸಿಸಿಐ ಯುಎಈ ಘಟಕ ನಿರ್ಧರಿಸಿದೆ’ ಎಂದು ಹೇಳಿದರು.

ಆಸಕ್ತ ಯುವ ಪ್ರತಿಭೆಗಳು ತಮ್ಮ ವೈಯಕ್ತಿಕ ವಿವರಗಳನ್ನು ಹಾಗೂ ಸ್ಟಾರ್ಟಪ್ ಯೋಜನೆಗೆ ನೀಡಿರುವ ಹೆಸರಿನೊಂದಿಗೆ admin@bcciuae.com ಗೆ ನವೆಂಬರ್ ೩೦ರ ಒಳಗಾಗಿ ನೊಂದಾಯಿಸಬೇಕು, ಬಿಸಿಸಿಐ ಯುಎಈ ಸಮಿತಿಯು ಆಯ್ದ ಪ್ರತಿಭೆಗಳಿಗೆ ದುಬೈನಲ್ಲಿ ಬಿಸಿಸಿಐ ವತಿಯಿಂದ ನಡೆಯಲಿರುವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಬಂಡವಾಳಗಾರರೊAದಿಗೆ ವೇದಿಕೆ ಒದಗಿಸಲಿದೆ ಎಂದು ಯುಎಈ ಘಟಕದ ಉಪಾಧ್ಯಕ್ಷ ಅಬ್ದುಲ್ಲಾ ಮದುಮೂಲೆ ತಿಳಿಸಿದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಅಬ್ದುಲ್ ರವೂಫ್, ಹಂಝ ಅಬ್ದುಲ್ ಖಾದರ್, ಮಹಮ್ಮದ್ ಅಲಿ ಉಚ್ಚಿಲ್, ನವೀದ್ ಮಾಗುಂಡಿ, ಬಶೀರ್ ಕಿನ್ನಿಂಗಾರ್, ಇಮ್ರಾನ್ ಖಾನ್ ಎರ್ಮಾಳ್ ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*