ಸುಖ-ಶಾಂತಿಗೆ ‘ಕಾರ್ತಿಕ’ ಮಾಸದಲ್ಲಿ ತಪ್ಪದೆ ಮಾಡಿ ಈ ಕೆಲಸ – ಎನ್.ಎಂ.ಸಿ ನ್ಯೂಸ್

ಕಾರ್ತಿಕ ಮಾಸಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ. ಗಿಡಗಳಲ್ಲಿ ತುಳಸಿ ಗಿಡ, ಮಾಸಗಳಲ್ಲಿ ಕಾರ್ತಿಕ ಮಾಸ ಹಾಗೂ ದಿವಸಗಳಲ್ಲಿ ಏಕಾದಶಿ, ತೀರ್ಥಯಾತ್ರೆಯಲ್ಲಿ ದ್ವಾರಕಾ ನನಗೆ ಪ್ರಿಯ ಎಂದು ಶ್ರೀಕೃಷ್ಣ ಹೇಳಿದ್ದಾನೆ. ಧರ್ಮಶಾಸ್ತ್ರದಲ್ಲಿ ಧರ್ಮ, ಅರ್ಥ, ಕಾಮಕ್ಕೆ ಮೋಕ್ಷ ನೀಡುವ ಮಾಸ ಕಾರ್ತಿಕ ಮಾಸ ಎಂದು ಪರಿಗಣಿಸಲಾಗಿದೆ. ಕಾರ್ತಿಕ ಮಾಸ ಆರಂಭವಾಗುತ್ತಿದೆ. ಈ ಮಾಸದಲ್ಲಿ ದೀಪದಾನ, ತುಳಸಿ ಪೂಜೆ, ಭೂಮಿ ಮೇಲೆ ಮಲಗುವುದು, ಬ್ರಹ್ಮಚರ್ಯದ ಪಾಲನೆ ಮಾಡುವುದು ಸೇರಿದಂತೆ ಕೆಲವೊಂದು ನಿಯಮಗಳ ಪಾಲನೆಯಿಂದ ಜೀವನದಲ್ಲಿ ಪ್ರಗತಿ ಲಭಿಸುತ್ತದೆ.

ಕಾರ್ತಿಕ ಮಾಸದಲ್ಲಿ ಶುದ್ಧ ತುಪ್ಪ ಅಥವಾ ಸಾಸಿವೆ ಎಣ್ಣೆಯಿಂದ ಪ್ರತಿದಿನ ದೀಪ ಬೆಳಗಬೇಕು. ಹೀಗೆ ಮಾಡಿದ್ರೆ ಅಶ್ವಮೇಧ ಯಾಗ ಮಾಡಿದಷ್ಟು ಪುಣ್ಯ ಪ್ರಾಪ್ತಿಯಾಗುತ್ತದೆ. ದೇವಾಲಯಗಳಿಗೆ ಹಾಗೂ ನದಿ ಬದಿಯಲ್ಲಿ ದೀಪ ಬೆಳಗುವುದರಿಂದ ಲಕ್ಷ್ಮಿಯ ಕೃಪೆ ಪ್ರಾಪ್ತಿಯಾಗುತ್ತದೆ. ಈ ತಿಂಗಳಲ್ಲಿ ದೀಪದಾನ ಮಾಡುವುದರಿಂದ ವಿಷ್ಣುವಿನ ಕೃಪೆ ಲಭಿಸುತ್ತದೆ. ಜೀವನದಲ್ಲಿನ ಕತ್ತಲು ದೂರವಾಗಿ ಬೆಳಕು ಮೂಡುತ್ತದೆ. ಕಾರ್ತಿಕ ಮಾಸದಲ್ಲಿ ತುಳಸಿ ಪೂಜೆ ಮಾಡುವುದು ಒಳ್ಳೆಯದು. ಮನೆಯಲ್ಲಿ ಶಾಂತಿ, ಸಂತೋಷ ಸದಾ ನೆಲೆಸಿರಲೆಂದು ಬಯಸುವ ವ್ಯಕ್ತಿ ಅವಶ್ಯವಾಗಿ ತುಳಸಿ ಪೂಜೆ ಮಾಡಬೇಕು. ಶುಭ ಕಾರ್ಯಗಳು ನಡೆಯುವ ಮನೆಯಲ್ಲಿ ಸದಾ ತುಳಸಿ ಹಸಿರಾಗಿರ್ತಾಳೆ. ಯಾರ ಮನೆಯಲ್ಲಿ ಅಶುಭ ಕಾರ್ಯಗಳು ನಡೆಯುತ್ತವೆಯೋ ಆ ಮನೆಯಲ್ಲಿ ತುಳಸಿ ನೆಲೆ ನಿಲ್ಲುವುದಿಲ್ಲ.

ಭೂಮಿಯ ಮೇಲೆ ಮಲಗುವುದರಿಂದ ಮನುಷ್ಯನಲ್ಲಿರುವ ವಿಲಾಸಿತನ ದೂರವಾಗುತ್ತದೆ. ಸಾತ್ವಿಕ ಭಾವನೆ ಮೂಡುತ್ತದೆ. ವೈಜ್ಞಾನಿಕ ದೃಷ್ಟಿಯಿಂದ ನೋಡುವುದಾದ್ರೆ ಮಾನಸಿಕ ಹಾಗೂ ದೈಹಿಕ ಆರೋಗ್ಯದಲ್ಲಿ ವೃದ್ಧಿಯಾಗುತ್ತದೆ. ಕಾರ್ತಿಕ ಮಾಸದಲ್ಲಿ ಬ್ರಹ್ಮಚರ್ಯ ಪಾಲನೆ ಮಾಡಬೇಕು. ಅಚ್ಚುಕಟ್ಟಾಗಿ ಬ್ರಹ್ಮಚರ್ಯ ಪಾಲನೆ ಮಾಡುವುದರಿಂದ ಸುಖ, ಶಾಂತಿ ಲಭಿಸುತ್ತದೆ. ಕೆಲವೊಂದು ಆಹಾರಗಳನ್ನು ಕಾರ್ತಿಕ ಮಾಸದಲ್ಲಿ ಸೇವನೆ ಮಾಡಬಾರದು. ಉದ್ದು, ಹಾಗಲಕಾಯಿ, ಬಿಳಿಬದನೆ ಕಾಯಿಯಿಂದ ದೂರ ಇರಬೇಕು.

 

Be the first to comment

Leave a Reply

Your email address will not be published.


*