ಕುಡಿದ ಮತ್ತಿನಲ್ಲಿ ಖಾಸಗಿ ಬಸ್‌ಗೆ ತೊಂದರೆ ನೀಡಿದ ಬೈಕ್ ಸವಾರ – ಎನ್.ಎಂ.ಸಿ ನ್ಯೂಸ್

ಕುಡಿದ ಮತ್ತಿನಲ್ಲಿ ಬೈಕ್ ಓಡಿಸಿದ್ರೆ ಅದರ ಕತೆನೇ ಬೇರೆ ಇರುತ್ತದೆ. ಅದರಲ್ಲೂ ಯುವಕರು ಕುಡಿದು ಮಾಡುವ ಡ್ರೆöÊವ್ ಅವರಿಗೆ ಮಾತ್ರವಲ್ಲದೆ ಬೇರೆಯವರಿಗೂ ತೊಂದರೆ ಕಟ್ಟಿಟ್ಟ ಬುತ್ತಿಯಾಗಿದೆ. ಇಲ್ಲೊಂದು ಕಡೆ ಅದೇ ರೀತಿಯಾಗಿದೆ. ಕುಡಿದ ಮತ್ತಿನಲ್ಲಿ ಯುವಕರು ಮಾಡಿದ ಕೆಲಸಕ್ಕೆ ಖಾಸಗಿ ಬಸ್ ತೊಂದರೆ ಸಿಲುಕಿದೆ. ಮಂಗಳೂರನ ಬೈಕಂಪಾಡಿ ಎಂಬಲ್ಲಿ ಯುವಕ ಕುಡಿದ ಮತ್ತಿನಲ್ಲಿ ಖಾಸಗಿ ಬಸ್ ಒಂದಕ್ಕೆ ತೊಂದರೆಯನ್ನು ನೀಡಿ ಬೈಕ್ ಅಡ್ಡ ದಿಡ್ಡಿ ಚಲಿಸಿದ್ದಾನೆ. (ಬೈಕ್ ಸಂಖ್ಯೆ ಕೆ.ಎ ೧೯ ಇ.ಎಕ್ಸ್ ೮೫೮೯ )

ಸರಿಸುಮಾರು ೫೦ ಜನರು ಪ್ರಯಾಣಿಸುತ್ತಿದ್ದ ಬಸ್‌ಗೆ ಸೈಡ್ ಕೊಡದೆ, ಅವಾಚ್ಯ ಶಬ್ದಗಳಿಂದ ಬೈದು ಅಮಾನವೀಯತೆಯಿಂದ ನಡೆದುಕೊಂಡಿದ್ದಾರೆ. ಇದನ್ನು ಗಮನಿಸಿದ ಪ್ರಯಾಣಿಕರು ಹಾಗೂ ಅಲ್ಲಿನ ಸಾರ್ವಜನಿಕರು ತಮ್ಮ ಮೊಬೈಲ್‌ನಲ್ಲಿ ಆ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ. ಕುಡಿದು ಬೈಕ್ ಚಲಾಯಿಸಿದಲ್ಲದೆ, ಹಿಂಬದಿ ಸವಾರ ಹೆಲ್ಮೆಟ್ ಧರಿಸದೆ ಸಂಚಾರಿ ನಿಯಮಕ್ಕೆ ಉಲ್ಲಂಘನೆ ಮಾಡಿದ ಈ ಯುವಕರ ಬಗ್ಗೆ ಪೊಲೀಸರು ತಕ್ಷಣ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ.

Be the first to comment

Leave a Reply

Your email address will not be published.


*