ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪಕ್ಷ ಅವಕಾಶ ನೀಡಿದರೆ ಸ್ಪರ್ಧೆ; ಜಿ.ಎ ಶಂಸುದ್ದೀನ್ ಅಜ್ಜಿನಡ್ಕ

ಪುಣಚ: ಮುಂದಿನ ಮೇ ತಿಂಗಳಲ್ಲಿ ನಡೆಯುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿದರೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ದನಾಗಿದ್ದೇನೆ ಎಂದು ಜಿಲ್ಲಾ ಕಾಂಗ್ರೆಸ್ ಮಾಜಿ ಮಾಧ್ಯಮ ವಕ್ತಾರ ಹಾಗೂ ಯುವ ಕಾಂಗ್ರೆಸ್ ನಾಯಕ ಜಿ.ಎ ಶಂಸುದ್ದೀನ್ ಅಜ್ಜಿನಡ್ಕ ಅವರು ಮಾಹಿತಿ ನೀಡಿದ್ದಾರೆ. ಹುಟ್ಟು ಕಾಂಗ್ರೆಸ್ ಕಾರ್ಯಕರ್ತನಾಗಿ ತಳಮಟ್ಟದಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಕಾಂಗ್ರೆಸ್ ಪಕ್ಷದ ಮೂಲಕ ಹಂತ ಹಂತವಾಗಿ ನನ್ನ ರಾಜಕೀಯ ಗುರುಗಳು ಮಾರ್ಗದರ್ಶಕರಾದ ಎಂ.ಎಸ್ ಮಹಮ್ಮದ್ ಅವರ ಮುಖಾಂತರ ನಾನು ವಿವಿಧ ಸ್ಥಾನಗಳನ್ನು ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಅವಕಾಶ ಆಗಿದೆ ಎಂದರು

ಈಗಾಗಲೇ ಪುಣಚ ಗ್ರಾಮದ ಅಜ್ಜಿನಡ್ಕ ವಾರ್ಡಿನಲ್ಲಿ ಸ್ಪರ್ಧಿಸಲು ಆಕಾಂಕ್ಷೆ ಹೊಂದಿದ್ದೇನೆ ಈ ಭಾಗದ ಜನಸಾಮಾನ್ಯರ ನಡುವೆ ನಿಕಟ ಸಂಪರ್ಕ ಹೊಂದಿದ್ದೇನೆ ಮತ್ತು ನನ್ನ ಭಾಗದ ಸರ್ವ ಜನತೆಯ ಒತ್ತಾಯ ಇದೆ ಪಕ್ಷ ಅವಕಾಶ ನೀಡಿದರೆ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕತೆ ಹೊಂದಿದ್ದೇನೆ ಎಂದರು ಈಗಾಗಲೇ ನಮ್ಮ ನಾಯಕರಾದ ಎಂ.ಎಸ್ ಮಹಮ್ಮದ್ ಅವರಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಅಭಿಪ್ರಾಯ ಮಂಡಿಸಿದ್ದೇನೆ. ಅವರ ತಿರ್ಮಾನದೊಂದಿಗೆ ಚುನಾವಣೆಯಲ್ಲಿ ಪಕ್ಷ ಅವಕಾಶ ನೀಡಿದರೆ ಸ್ಪರ್ಧಿಸಲು ಸಿದ್ದನಾಗಿದ್ದೇನೆ.

ಒಂದು ವೇಳೆ ಅವಕಾಶ ಸಿಗದೇ ಇದ್ದಲ್ಲಿ ನಮ್ಮ ನಾಯಕರಾದ ಎಂ.ಎಸ್ ಮಹಮ್ಮದ್ ಅವರ ನಿರ್ಧಾರದಂತೆ ಪಕ್ಷದ ಹಿತ ದೃಷ್ಟಿಯಿಂದ ಪಕ್ಷದಲ್ಲಿ ಯಾರೇ ಅಭ್ಯರ್ಥಿ ಆದರೂ ಅವರ ಗೆಲುವಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ನಮ್ಮನ್ನು ಪಕ್ಷ ಅನೇಕ ಸಂದರ್ಭಗಳಲ್ಲಿ ಗುರುತಿಸಿದೆ. ಈ ಭಾರಿಯ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗುರುತಿಸುವ ವಿಶ್ವಾಸ ಇದೆ ಗುರುತಿಸಿದರೆ ಪ್ರಾಮಣಿಕ ರೀತಿಯಲ್ಲಿ ಸ್ಪರ್ಧಿಸುತ್ತೇನೆ. ಅವಕಾಶ ಸಿಗದೇ ಹೋದಲ್ಲಿ ಪಕ್ಷಕ್ಕಾಗಿ ಅಭ್ಯರ್ಥಿ ಗೆಲುವಿಗೆ ಪ್ರಾಮಣಿಕ ಪ್ರಯತ್ನ ಮಾಡುತ್ತೇನೆ ಎಂದು ಎನ್ ಎಮ್ ಸಿ ನ್ಯೂಸ್ ಜೊತೆ ಜಿ.ಎ ಶಂಸುದ್ದೀನ್ ಅಜ್ಜಿನಡ್ಕ ಮಾಹಿತಿ ಹಂಚಿಕೊಂಡಿದ್ದಾರೆ

Be the first to comment

Leave a Reply

Your email address will not be published.


*