ಮಲ್ಪೆ: ಕಾಂಗ್ರೆಸ್ ಹಿರಿಯ ನಾಯಕಿ ಜಯಶ್ರೀ ಕೃಷ್ಣರಾಜ್ ನಿಧನ – ಎನ್.ಎಂ.ಸಿ ನ್ಯೂಸ್

ಉಡುಪಿ: ಮಲ್ಪೆಯ ಮಧ್ವರಾಜ್ ಸಹೋದರ ಕೃಷ್ಣ ರಾಜ್ ಅವರ ಪತ್ನಿ ಜಯಶ್ರೀ ಕೃಷ್ಣ ರಾಜ್ ದೆಹಲಿಯಲ್ಲಿನ ತನ್ನ ಪುತ್ರಿ ಮನೆಯಲ್ಲಿ ನಿಧನರಾಗಿದ್ದಾರೆ. ಜಯಶ್ರೀ ಕೃಷ್ಣರಾಜ್ ಅವರು ಮೂರು ಮಕ್ಕಳನ್ನು ಹೊಂದಿದ್ದರು.

ಹಿರಿಯ ಕಾಂಗ್ರೆಸ್ ನಾಯಕಿಯಾಗಿದ್ದ ಜಯಶ್ರೀ ಕೃಷ್ಣರಾಜ್ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಇದರ ಸದಸ್ಯೆಯಾಗಿ, ಕೆಪಿಸಿಸಿ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ, ಉಡುಪಿ ನಗರಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಲಯನ್ಸ್ ಕ್ಲಬ್ ಹಾಗೂ ಇನ್ನಿತರ ಮಹಿಳಾ ಸಂಘಟನೆಗಳಲ್ಲಿ ಸಕ್ರಿಯವಾಗಿದ್ದರು. ಮಹಿಳಾ ಸಂಘಟನೆ ಸಹಿತ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುತ್ತಿದ್ದ ಮಲ್ಪೆ ಜಯಶ್ರೀ ಕೃಷ್ಣರಾಜ್ ನಿಧನರಾಗಿದ್ದಾರೆ.

Be the first to comment

Leave a Reply

Your email address will not be published.


*