ಅನರ್ಹ ಶಾಸಕರಿಗೆ ಮತ್ತೆ ನಿರಾಸೆ : ಮತ್ತೆ ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್ – ಎನ್.ಎಂ.ಸಿ ನ್ಯೂಸ್

ನವದೆಹಲಿ : ಇಂದು ಸುಪ್ರೀಂ ಕೋರ್ಟ್‍ನಲ್ಲಿ ತಮ್ಮ ಪರವಾಗಿ ತೀರ್ಪು ಬರಲಿದೆ ಎಂದು ನಿರೀಕ್ಷಿಸಿದ್ದ, 17 ಅನರ್ಹ ಶಾಸಕರಿಗೆ ಮತ್ತೆ ಬಿಗ್ ಶಾಕ್ ಅನ್ನು ಸುಪ್ರೀಂ ಕೋರ್ಟ್ ನೀಡಿದೆ. ನಾಳೆಗೆ ವಿಚಾರಣೆಯನ್ನು ಮುಂದೂಡಿದೆ. ಸುಪ್ರೀಂಕೋರ್ಟ್ ನಲ್ಲಿ ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್ ಅವರು ಒಂದು ವಾರ ವಿಚಾರಣೆ ಮುಂದೂಡಲು ಮನವಿ ಮಾಡಿದ್ದರು. ಮನವಿಯನ್ನು ಸುಪ್ರೀಂಕೋರ್ಟ್ ಪುರಸ್ಕರಿಸಿದೆ. ಆದರೆ. ಒಂದೂ ವಾರದ ಬದಲಾಗಿ 1 ದಿನ ವಿಚಾರಣೆಯನ್ನೂ ಮುಂದೂಡಿದೆ. ಹೀಗಾಗಿ ಇಂದು ನಡೆಯಬೇಕಿದ್ದ ಅನರ್ಹ ಶಾಸಕರ ವಿಚಾರಣೆ ನಾಳೆ ನಡೆಯಲಿದೆ.

Be the first to comment

Leave a Reply

Your email address will not be published.


*