35 ಅಡಿಯಿಂದ ಬಿದ್ದರೂ 3 ವರ್ಷದ ಮಗುವಿಗೆ ಏನು ಆಗಲಿಲ್ಲ..! ಯಾಕೆ ಗೊತ್ತಾ.? – ಎನ್.ಎಂ.ಸಿ ನ್ಯೂಸ್

ಮೂರು ವರ್ಷದ ಮಗುವೊಂದು 35 ಅಡಿ ಎತ್ತರ ಇರುವ ಎರಡನೇ ಮಹಡಿಯಿಂದ ಬಿದ್ದರೂ ಅದೃಷ್ಟವಶಾತ್ ಬದುಕುಳಿದ ಘಟನೆ ಮಧ್ಯಪ್ರದೇಶದ ತಿಕಮ್‍ಗಢದಲ್ಲಿ ನಡೆದಿದೆ.

ತನ್ನ ಪರಿವಾರದವರೊಡನೆ ಬಾಲಕ ಆಡುತ್ತಿದ್ದಾಗ ಆಯತಪ್ಪಿ ಎರಡನೇ ಮಹಡಿಯ ಬಾಲ್ಕನಿಯಿಂದ ಬಿದ್ದಿದ್ದಾನೆ. ಆದರೆ ಮಗುವಿನ ಆಯಸ್ಸು ಗಟ್ಟಿ ಇದ್ದು ಅದೇ ಸಮಯಕ್ಕೆ ಸೈಕಲ್ ರಿಕ್ಷಾ ಒಂದು ಅದೇ ಜಾಗದಲ್ಲಿ ಹೋಗುತ್ತಿತ್ತು. ಅದರ ಸೀಟಿನ ಮೇಲೆ ಮಗು ಬಿದ್ದಿದ್ದರಿಂದ ಬದುಕುಳಿದಿದೆ.

ತಕ್ಷಣ ರಿಕ್ಷಾ ಚಾಲಕ ಹಾಗೂ ಸುತ್ತಮುತ್ತಲಿನ ಜನ ಮಗುವನ್ನು ಎತ್ತಿಕೊಂಡಿದ್ದಾರೆ. ಅವರ ಪಾಲಕರು ಮಗುವನ್ನು ಆಸ್ಪತ್ರೆಗೆ ತೋರಿಸಿದ್ದು ವೈದ್ಯರು ಏನೂ ತೊಂದರೆ ಆಗಿಲ್ಲ ಎಂದಿದ್ದಾರೆ. ಘಟನೆ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Be the first to comment

Leave a Reply

Your email address will not be published.


*