ಬ್ಲಡ್ ಡೋನರ್ಸ್ ಮಂಗಳೂರು ಇದರ 210 ನೇ ರಕ್ತದಾನ ಶಿಬಿರ – ಎನ್.ಎಂ.ಸಿ ನ್ಯೂಸ್

ಗೋಳಿತೊಟ್ಟು : ಸೌಹಾರ್ದ ಬಳಗ ಕೋಲ್ಪೆ-ಗೋಳಿತೊಟ್ಟು, ಬ್ಲಡ್ ಡೋನರ್ಸ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಎ.ಜೆ ಆಸ್ಪತ್ರೆಯ ಸಹಕಾರದೊಂದಿಗೆ ಬೃಹತ್ ರಕ್ತದಾನ ಶಿಬಿರವು ದ.ಕ.ಜಿಲ್ಲಾ ಸರಕಾರಿ ಮಾದರಿ ಹಿ.ಪ್ರಾ. ಶಾಲೆ ಗೋಳಿತೊಟ್ಟು ಇದರ ಸಭಾಂಗಣದಲ್ಲಿ ನಡೆಯಿತು.

ಸಭಾ ಕಾರ್ಯಕ್ರಮವನ್ನು ಬಿಷಾರ ಹೆಲ್ಪಿಂಗ್ ಹ್ಯಾಂಡ್ಸ್ ಕೊಲ್ಪೆ ಇದರ ಕಾರ್ಯನಿರ್ವಾಹಕ ಪೈಝಲ್ ಶೇಖ್ ಕೋಲ್ಪೆ ಹಾಗೂ ಸದಸ್ಯರಾದ ಶಾಹಜಾನ್ ಕೋಲ್ಪೆ ರಕ್ತದಾನ ಮಾಡುವ ಮೂಲಕ ಉದ್ಘಾಟನಾ ಕಾರ್ಯಕ್ರಮವನ್ನು ನೇರವೆರಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬಿ.ಜೆ.ಎಂ ಕೋಲ್ಪೆ ಖತೀಬರಾದ ರಶೀದ್ ರಹ್ಮಾನಿ ಮಾನವೀಯತೆಯ ಮೌಲ್ಯವನ್ನು ಎತ್ತಿಹಿಡಿಯಿರಿ, ರಕ್ತದಾನ ಮಾಡಿ ಸಮಾಜಕ್ಕೆ ಮಾದರಿಯಾಗಿ ಎಂದು ಹೇಳಿದರು.  

ಮುಖ್ಯ ಅತಿಥಿಗಳಾಗಿ ಝಾಕರಿಯಾ ಮಸ್ಲಿಯಾರ್ ಇಮಾಮರು ರಹ್ಮಾನಿಯಾ ಮಸೀದಿ ಕೊಚ್ಚಿಲ ,ಆದಂ ಎಂ. ಅಧ್ಯಕ್ಷರು ಬಿ.ಜೆ.ಎಂ ಕೋಲ್ಪೆ, ಎಚ್. ಮುಹಮ್ಮದ್ ಹಾಜಿ ಅಧ್ಯಕ್ಷರು ಸಹದಿಯ ಸಮಿತಿ ಕೊಚ್ಚಿಲ- ಗೋಳಿತೊಟ್ಟು, ಸಿದ್ಧೀಖ್ ಮಂಜೇಶ್ವರ ಅಧ್ಯಕ್ಷರು ಬ್ಲಡ್ ಡೋನರ್ಸ್ ಮಂಗಳೂರು (ರಿ), ಶ್ರೀ ಗೋಪಾಲಕೃಷ್ಣ ವೈದ್ಯಾಧಿಕಾರಿ ಎ.ಜೆ. ಆಸ್ಪತ್ರೆ ಮಂಗಳೂರು, ಶಾಲಿನಿ ಶೇಖರ ಪೂಜಾರಿ ಅಧ್ಯಕ್ಷರು ಗ್ರಾಮ ಪಂಚಾಯತ್ ಗೋಳಿತೊಟ್ಟು, ಹಾರಿಸ್ ಪಿ.ಎಸ್ ಅಧ್ಯಕ್ಷರು ಯಂಗ್ ಮೆನ್ಸ್ ಅಸೋಸಿಯೇಶನ್ ಕೊಚ್ಚಿಲ-ಗೋಳಿತೊಟ್ಟು , ಕೆ.ಕೆ ಅಬೂಬಕ್ಕರ್ ಮಾಜಿ ಅಧ್ಯಕ್ಷರು ಬಿ.ಜೆ.ಎಂ ಕೋಲ್ಪೆ, ಇಸ್ಮಾಯಿಲ್ ಕೆ.ಕೆ ಅಧ್ಯಕ್ಷರು ಖಲಂದರ್ ಷಾ ದಫ್ ಕಮಿಟಿ ಕೋಲ್ಪೆ, ಸಾಧಿಕ್ ಅತ್ತಾಜೆ ಅದ್ಯಕ್ಷರು ಪಿ.ಎಫ್.ಐ ನೆಲ್ಯಾಡಿ ವಲಯ, ರಫೀಖ್ ಕೋಲ್ಪೆ ಅಧ್ಯಕ್ಷರು ಬಿಷಾರ ಹೆಲ್ಪಿಂಗ್ ಕೊಲ್ಪೆ, ಬಶೀರ್ ಅಧ್ಯಕ್ಷರು ಎಸ್.ಡಿ.ಎಂ.ಸಿ ಸ.ಹಿ.ಪ್ರಾ ಶಾಲೆ ಗೋಳಿತೊಟ್ಟು. ಇಮ್ರಾನ್ ಉಪ್ಪಿನಂಗಡಿ ಕಾರ್ಯನಿರ್ವಾಹಕರು, ಬ್ಲಡ್ ಡೋನರ್ಸ್ ಮಂಗಳೂರು , ಮೊಹಿದ್ದೀನ್ ಅಧ್ಯಕ್ಷರು ಎಸ್.ಡಿ.ಎಂ.ಸಿ ಸ.ಹಿ.ಪ್ರಾ.ಶಾಲೆ ಕೊಣಾಲು, ಅಬ್ದುಲ್ ಕುಂ? ಉಪಾಧ್ಯಕ್ಷರು, ಬಿ.ಜೆ.ಎಂ ಕೋಲ್ಪೆ, ರಫೀಕ್ ಸಖಾಫಿ ಅತೂರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು (ರಿ) ಕಾರ್ಯನಿರ್ವಾಹಕರಾದ ದಾವೂದ್ ಬಾಜಾಲ್, ಫಾರೂಕ್ ಬಿಗ್ ಗ್ಯಾರಜ್, ಲತೀಫ್ ಉಪ್ಪಿನಂಗಡಿ, ಝಹೀರ್ ಶಾಂತಿನಗರ, ಫಾರೂಖ್ ರೊಮ್ಯಾಂಟಿಕ್, ಮುಖ್ತಾರ್ ಕುಂಬ್ರ. ಸೌಹಾರ್ದ ಬಳಗ ಕೋಲ್ಪೆ- ಗೋಳಿತೊಟ್ಟು ಇದರ ಕಾರ್ಯನಿರ್ವಾಹಕರಾದ ನವಾಝ್ ಶೇಖ್, ಸಾದೀಖ್ ಗೋಳಿತೊಟ್ಟು, ನೌಫಲ್ ಗೋಳಿತೊಟ್ಟು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ನವಾಝ್ ಶೇಖ್ ಕೋಲ್ಪೆ ಸ್ವಾಗತಿಸಿ, ರಝಾಕ್ ಸಾಲ್ಮರ ನಿರೂಪಿಸಿ, ಇಮ್ರಾನ್ ಉಪ್ಪಿನಂಗಡಿ ವಂದಿಸಿದರು.

Be the first to comment

Leave a Reply

Your email address will not be published.


*