ನ್ಯಾಶನಲ್ ಸ್ಟೂಡೆಂಟ್ ಯೂನಿಯನ್ ಆಫ್ ಇಂಡಿಯಾದ ಕಾಲೇಜು ಘಟಕದ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಯು ಟಿ ಖಾದರ್ ಭಾಗಿ – ಎನ್.ಎಂ.ಸಿ ನ್ಯೂಸ್

ನ್ಯಾಶನಲ್ ಸ್ಟೂಡೆಂಟ್ ಯೂನಿಯನ್ ಆಫ್ ಇಂಡಿಯಾ ಸಂಘಟನಾ ಶಕ್ತಿಯನ್ನು ಬೆಳೆಸುತ್ತದೆ. ನನ್ನ ರಾಜಕೀಯ ಜೀವನವು ಎನ್.ಎಸ್‍ಯುಐ ನಿಂದಲೇ ಆರಂಭವಾದದ್ದು. ಸಕ್ರಿಯವಾಗಿ ತೊಡಗಿಸಿಕೊಂಡ ಕಾರಣ ನನ್ನ ರಾಜಕೀಯ ತಳಹದಿ ಗಟ್ಟಿಯಾಯಿತು ಎಂದು ಶಾಸಕ ಯು ಟಿ ಖಾದರ್ ಹೇಳಿದರು. ಕಾಂಗ್ರೆಸ್ ಕಛೇರಿಯಲ್ಲಿ ನಡೆದ ನ್ಯಾಶನಲ್ ಸ್ಟೂಡೆಂಟ್ ಯೂನಿಯನ್ ಆಫ್ ಇಂಡಿಯಾದ ಕಾಲೇಜು ಘಟಕದ ಉದ್ಘಾಟನಾ ಸಮಾರಂಭದಲ್ಲಿ ಈ ಮಾತನ್ನು ಹೇಳಿದರು.

ನ್ಯಾಶನಲ್ ಸ್ಟೂಡೆಂಟ್ ಯೂನಿಯನ್ ಆಫ್ ಇಂಡಿಯಾದಿಂದ ಸಂಘಟನಾ ಶಕ್ತಿಯನ್ನು ಬೆಳೆಸಿಕೊಳ್ಳಿ. ನಿಮ್ಮೆಲ್ಲಾ ಕೆಲಸ,ಸಂಘಟನೆ ಸಂವಿಧಾನ ರಾಷ್ಟ್ರೀಯತೆ ಮಹಾತ್ಮ ಗಾಂಧಿಯ ಕನಸಿನ ಭಾರತ ನಿರ್ಮಾಣಕ್ಕೆ ಹೆಜ್ಜೆ ಇರಿಸಿ ಎಂದು ಆಶಿಸಿದರು.

ಈ ಸಂಘಟನೆ ತಾಳ್ಮೆ ಸಮಾಧಾನ,ಒಗ್ಗಟ್ಟಿನಿಂದ ಇರಲಿ ಯಾರಿಗೂ ತೊಂದರೆ ಆಗದೇ ಇರಲಿ.ಪ್ರಯೋಜನ ಆಗಲಿ.ವಿದ್ಯಾರ್ಥಿಗಳು ನಾಯಕರು ಶಿಕ್ಷಕರ, ಆಡಳಿತ ಮಂಡಳಿಯ, ಬೇರೆ ಬೇರೆ ಡಿಪಾರ್ಟ್‍ಮೆಂಟ್‍ನ ಜೊತೆ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳಿ ಎಂದರು.

ಈ ಸಂಘಟನೆ ಏಕತೆ, ಒಗ್ಗಟ್ಟಿನ ಸೆಳೆಯಾಗಬೇಕು. ವಿದ್ಯಾರ್ಥಿಗಳ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ನಾಯಕರ ಸಹಾಯವನ್ನು ಪಡೆದುಕೊಳ್ಳಿ. ನಿಮಗೆ ಗಾಂಧಿಯ ಕನಸಿನ ಭಾರತ, ಅಂಬೇಡ್ಕರ್ ಅವರ ಸಂವಿಧಾನ ಮಾದರಿ ಎಂದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರೀಶ್ ಕುಮಾರ್ ವಹಿಸಿಕೊಂಡಿದ್ದರು. ಈ ವೇಳೆ ಮಿಥುನ್ ರೈ, ಮಂಗಳೂರು ಉತ್ತರ ಯುವ ಕಾಂಗ್ರೆಸ್‍ನ ಅಧ್ಯಕ್ಷ ಗಿರೀಶ್ ಆಳ್ವ, ಎನ್.ಎಸ್‍ಯುಐ ಉಸ್ತುವಾರಿಯಾದ ಸುರೇಶ್ ಶೆಟ್ಟಿ, ಸುಹೈಲ್, ಸನತ್ ರೈ, ಅನ್ವಿತ್ ಕಟೀಲ್ ಸೇರಿದಂತೆ ಗಣ್ಯಾತಿ ಗಣ್ಯರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*