ಬಜ್ಪೆ ಆರೋಗ್ಯ ಕೇಂದ್ರವು ಜನಸ್ನೇಹಿಯಾಗಬೇಕು; ಯು ಟಿ ಖಾದರ್ – ಎನ್.ಎಂ.ಸಿ ನ್ಯೂಸ್

ಗ್ರಾಮದ ಆರೋಗ್ಯ ಕೇಂದ್ರ ಉತ್ತಮವಾಗಿದ್ದರೆ ಊರಿನ ಜನರ ಆರೋಗ್ಯ ಚೆನ್ನಾಗಿರುತ್ತೆ. ಈ ಆರೋಗ್ಯ ಕೇಂದ್ರಕ್ಕೆ ನನ್ನ ಸಂಪೂರ್ಣ ಸಹಕಾರ ಇದೆ ಎಂದು ಶಾಸಕ ಯು ಟಿ ಖಾದರ್ ಹೇಳಿದ್ರು. ಬಜ್ಪೆ ಆರೋಗ್ಯ ಕೇಂದ್ರದ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಇವರು ಆಶಾಕಾರ್ಯಕರ್ತೆಯರಿಗೆ ಸಿಗುವ ಸವಲತ್ತು, ಡಾಕ್ಟರ್‍ಗಳ ನೇಮಕ, ಆಸ್ಪತ್ರೆಯಲ್ಲಿ ಇರಬೇಕಾದ ಮುನ್ಸೂಚನಾ ಕ್ರಮ, ಸಿಸಿ ಟಿವಿ ಹೀಗೆ ಅನೇಕ ವಿಚಾರಗಳ ಬಗ್ಗೆ ಹೇಳಿದರು.

ಬಜ್ಪೆ ಆರೋಗ್ಯ ಕೇಂದ್ರವು ಜನಸ್ನೇಹಿಯಾಗಬೇಕು. ಡಾಕ್ಟರ್, ನರ್ಸ್, ಆಶಾ ಕಾರ್ಯಕರ್ತೆಯರು ಚೆನ್ನಾಗಿ ಕಾರ್ಯ ನಿರ್ವಹಿಸಬೇಕು. ರೋಗಕ್ಕೆ ಮದ್ದುಕೊಡುವುದು ಮಾತ್ರವಲ್ಲದೆ, ರೋಗವನ್ನು ತಡೆಗಟ್ಟುವ ಕಾರ್ಯವನ್ನು ಮಾಡಬೇಕೆಂದರು. ಸ್ಥಳವನ್ನು ದಾನಮಾಡಿದ ಸೋಮಶೇಖರ ಅವರ ಕುಟುಂಬವನ್ನು ಶ್ಲಾಘಿಸಿದರು.

ಈ ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕೋಟ ಶ್ರೀನಿವಾಸ ಪೂಜಾರಿ, ಉಮಾನಾಥ ಕೋಟ್ಯಾನ್ ಸೇರಿದಂತೆ ಗಣ್ಯಾತಿ ಗಣ್ಯರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*