ಕಾಂಗ್ರೆಸ್ ಶಾಸಕ ಭೈರತಿ ಸುರೇಶ್ ಗೆ ‘ಚಾಕು ಇರಿತ’ : ಪರಿಚಿತನಿಂದಲೇ ಕೃತ್ಯ -ಎನ್.ಎಂ.ಸಿ ನ್ಯೂಸ್

ಬೆಂಗಳೂರು : ಕಾಂಗ್ರೆಸ್ ಶಾಸಕ ಭೈರತಿ ಸುರೇಶ್ ಅವರ ಹತ್ಯೆಗೆ ಯತ್ನ ನಡೆಸಿದ ಆಘಾತಕಾರಿ ಘಟನೆ ನಡೆದಿದೆ. ಭೈರತಿ ಗ್ರಾಮದಲ್ಲಿ ಭೈರತಿ ಸುರೇಶ್ ಅವರ ಮೇಲೆ ಗ್ರಾಮದ ಶಿವು ಎಂಬಾತ ಚಾಕು ಇರಿದಿದ್ದಾನೆ. ಸುರೇಶ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿ ಸೆರೆಗೆ ಪೊಲೀಸರು ಬಲೆ ಬೀಸಿದ್ದಾರೆ. ಕಾಪೆರ್ಂಟರ್ ಆಗಿ ಕೆಲಸ ಮಾಡುತ್ತಿದ್ದ ಶಿವು, ಭೈರತಿ ಸುರೇಶ್ ಅವರಿಗೆ ಪರಿಚಿತನೇ ಆಗಿದ್ದ ಎನ್ನಲಾಗಿದೆ. ರಾಜಕೀಯ ದುರುದ್ದೇಶದಿಂದ ಈ ಹತ್ಯೆ ಯತ್ನ ನಡೆದಿಲ್ಲ ಎನ್ನಲಾಗಿದೆ. ಯಾವ ಕಾರಣಕ್ಕಾಗಿ ದಾಳಿ ನಡೆಸಿದ್ದಾನೆಂದು ಪೊಲೀಸ್ ತನಿಖೆಯಿಂದ ತಿಳಿಯಬೇಕಾಗಿದೆ.

Be the first to comment

Leave a Reply

Your email address will not be published.


*