ಒಳ್ಳೆಯ ಅವಕಾಶಕ್ಕಾಗಿ ಕಾಯುತ್ತಿರುವ ಸ್ಯಾಂಡಲ್ ವುಡ್‍ನ ಪಡುಕೋಣೆ – ಎನ್.ಎಂ.ಸಿ ನ್ಯೂಸ್

ಲೂಸ್ ಮಾದ ಯೋಗಿ ನಟನೆಯ ‘ರಾವಣ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು ಸಂಚಿತಾ ಪಡುಕೋಣೆ. ಕನ್ನಡದ ದೀಪಿಕಾ ಪಡುಕೋಣೆ ಎಂದು ಕರೆಯಲ್ಪಡುವ ಇವರೀಗ ಸದ್ಯ ‘ಮುತ್ತುಕುಮಾರ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಪ್ಪಟ ಕನ್ನಡದ ಹುಡುಗಿಯಾಗಿರುವ ಸಂಚಿತಾ ‘ರಾವಣ’ ಬಳಿಕ ‘ಸತ್ಯ ಹರಿಶ್ಚಂದ್ರ’ ಚಿತ್ರದಲ್ಲೂ ನಟಿಸಿದರು. ಆದರೆ ಈ ಚಿತ್ರಗಳು ಅವರಿಗೆ ಬ್ರೇಕ್ ತಂದು ಕೊಡಲಿಲ್ಲ. ಸದ್ಯ ನಟಿಸುತ್ತಿರುವ ‘ಮುತ್ತುಕುಮಾರ’ ಚಿತ್ರವು ತಮಗೆ ಒಳ್ಳೆಯ ಬ್ರೇಕ್ ಕೊಡುತ್ತದೆ ಎಂಬ ಭರವಸೆಯಲ್ಲಿದ್ದಾರೆ.

ಇತ್ತಿಚೆಗಷ್ಟೇ ನಡೆದ ‘ಮುತ್ತುಕುಮಾರ’ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲಿ ಸಂಚಿತಾ ಹೀಗೆ ಮಾತನಾಡಿದ್ದಾರೆ. ‘ಎಲ್ಲರೂ ನನ್ನನ್ನು ನೋಡುವುದಕ್ಕೆ ದೀಪಿಕಾ ಪಡುಕೋಣೆ ತರಹ ಇದ್ದೀರಿ ಅಂತಾರೆ. ಅದರೆ ನಾನು ಮಾಡಿದ ಯಾವ ಪಾತ್ರಗಳು ಕೂಡ ಇನ್ನೂ ಜನರ ಮನಸ್ಸಿಗೆ ಹತ್ತಿರವಾಗಿಲ್ಲ.ಇನ್ನೂ ಜನರ ಮನಸ್ಸಿಗೆ ರೀಚ್ ಅಗುವುದಕ್ಕೆ ನಾನು ಸಾಕಷ್ಟು ಪ್ರಯತ್ನ ಪಡ್ತಿದ್ದೀನಿ. ಖಂಡಿತಾ ನನಗೆ ಯಶಸ್ಸು ಸಿಕ್ಕೆ ಸಿಗುತ್ತದೆ’.  ಕುಂದಾಪುರದವರಾದ ಸಂಚಿತಾ ತಮ್ಮ ಹೆಸರಿನಲ್ಲಿ ಪಡುಕೋಣೆ ಇರುವುದರಿಂದ ಅನೇಕರು, ‘ನಿಮಗೂ ದೀಪಿಕಾ ಪಡುಕೋಣೆಗೂ ಏನಾದರೂ ಸಂಬಂಧ ಇದೆಯಾ’ ಎಂದು ಕೇಳಿದ್ದಾರಂತೆ. ಅದಕ್ಕೆ, ‘ಇಲ್ಲ, ಇಬ್ಬರದ್ದು ಒಂದೇ ಊರು, ಕುಂದಾಪುರ. ಅದನ್ನು ಬಿಟ್ಟರೆ ಅವರಿಗೂ ನನಗೂ ಯಾವುದೇ ಸಂಬಂಧವಿಲ್ಲ’ ಎನ್ನುತ್ತಾರೆ.

Be the first to comment

Leave a Reply

Your email address will not be published.


*