ಯುವಕ ವೃಂದ ಬೋಳಾರ ವತಿಯಿಂದ ಅದ್ಧೂರಿಯಾಗಿ ನಡೆದ ಬೋಳಾರ್ ನೈಟ್ – ಎನ್.ಎಂ.ಸಿ ನ್ಯೂಸ್

ನವರಾತ್ರಿ ಬಂದರೆ ಕರಾವಳಿಯಲ್ಲಿ ವಿಭಿನ್ನ ಲೋಕವೆ ಸೃಷ್ಠಿಯಾಗುತ್ತದೆ. ಈ ವೇಳೆಯಲ್ಲಿ ಹಲವಾರು ಯುವಕರ ವೃಂದ ತನ್ನದೇ ಆದ ವಿಭಿನ್ನ ಪ್ರಯೋಗದಿಂದ ಜನರನ್ನು ಸೆಳೆಯಲು ಮುಂದಾಗುತ್ತದೆ. ಅಂತಹದ್ದೇ ಒಂದು ಹೆಮ್ಮೆಯ ಸಂಘಟನೆ ಮಂಗಳೂರಿನ ಬೋಳಾರದ ಯುವಕ ವೃಂದ. ಕಳೆದ 60 ವರ್ಷಗಳಿಂದ ಕಾರ್ಯನಿರ್ವಹಿಸಿಕೊಂಡು ಬಂದಿರುವ ಈ ಯುವಕ ವೃಂದ ದಸರಾ ಸಮಯದಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ.

ಈ ಬಾರಿಯ ದಸರಾ ಸಮಯದಲ್ಲಿ ಮಾರಿಗುಡಿ ಮಹಿಷಮರ್ಧಿನಿ ಕ್ಷೇತ್ರ ಬೋಳಾರದ ಶೋಭಾಯಾತ್ರೆಯಲ್ಲಿ ಈ ಯುವಕರ ತಂಡ ಟ್ಯಾಬ್ಲೋ ಎಲ್ಲರ ಮನರಂಜಿಸಿತು. 

ಅಂತೆಯೇ ಬೋಳಾರದಲ್ಲಿ ನವರಾತ್ರಿಯ ಪ್ರಯುಕ್ತ ಬೋಳಾರ ನೈಟ್ ಎಂಬ ಅದ್ಧೂರಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶಾಸಕರಾದ ವೇದವ್ಯಾಸ್ ಕಾಮತ್ ಆಗಮಿಸಿ ಯುವಕ ವೃಂದವನ್ನು ಶ್ಲಾಘಿಸಿದ್ರು. ಸಭಾ ಕಾರ್ಯಕ್ರಮದ ಬಳಿಕ ನೃತ್ಯ ಸಂಗೀತ ಎಲ್ಲರನ್ನು ಆಕರ್ಷಿಸಿತು.    

ಈ ಯುವಕ ವೃಂದ ತಂಡ ಮನೋರಂಜನೆ ಮಾತ್ರವಲ್ಲದೆ, ಸ್ವಚ್ಛತೆ, ಕೈ ತೋಟ ನಿರ್ಮಾಣ, ಬೆಳ್ತಂಗಡಿಯ ಪ್ರವಾಹ ಪೀಡಿತರಿಗೆ ಸಹಾಯ ಹಸ್ತವನ್ನೂ ಚಾಚಿದ್ದಾರೆ. ಹೀಗೆ ಅನೇಕ ಚಟುವಟಿಕೆಗಳನ್ನು ಮಾಡುತ್ತಾ ಬಂದಿರುವ ಈ ತಂಡದ ಕಾರ್ಯವನ್ನು ಎಲ್ಲರು ಮೆಚ್ಚಿಕೊಂಡಿದ್ದಾರೆ. ಈ ತಂಡದ ಅಧ್ಯಕ್ಷತೆಯನ್ನು ಸೌರಭ್ ಕೊಟ್ಟಾರಿ ವಹಿಸಿಕೊಂಡಿದ್ದು ಅತ್ಯುತ್ತಮವಾಗಿ ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಒಟ್ಟಿನಲ್ಲಿ ಈ ಯುವಕರ ತಂಡವು ಎಲ್ಲರಿಗೆ ಮಾದರಿ ಅಂದರೆ ತಪ್ಪಿಲ್ಲ.

 

 

Be the first to comment

Leave a Reply

Your email address will not be published.


*