ಚಾಕರಿ ಮಾಡುತ್ತಿದ್ದ ವ್ಯಕ್ತಿಗೆ ತಿವಿದ ದೇವಸ್ಥಾನದ ಬಸವ; ವ್ಯಕ್ತಿ ಸಾವು – ಎನ್.ಎಂ.ಸಿ ನ್ಯೂಸ್

ಬಜಪೆ: ಚಾಕರಿ ಮಾಡುತ್ತಿದ್ದ ವ್ಯಕ್ತಿಯನ್ನು ಬಸವ ತುಳಿದ ಪರಿಣಾಮ ವ್ಯಕ್ತಿ ಸಾವನ್ನಪ್ಪಿದ ಘಟನೆ ನಡೆದಿದೆ. ಬಜಪೆಯ ಪೆರಾರ ಕಿನ್ನಿಮಜಲು ನಾಗಬ್ರಹ್ಮ ಶಾಸ್ತ ಬಲವಂಡಿ ದೇವ ದೈವಸ್ಥಾನದಲ್ಲಿ ಬಸವನ ಚಾಕರಿ ಮಾಡುತ್ತಿದ್ದ ಬಾಲಕೃಷ್ಣ ಶೆಟ್ಟಿ ಎಂಬವರು ಮೃತ ದುರ್ದೈವಿ.

ಇವರು ಕಳೆದ ಒಂದು ವರ್ಷದಿಂದ ಬಸವನ ಚಾಕರಿ ಮಾಡುತ್ತಿದ್ದರು. ಪೆರಾರ ಮಣ್ಕಿದಡಿ ನಿವಾಸಿಯಾಗಿರುವ ಇವರು ನಿನ್ನೆ ಸಂಜೆ ಹುಲ್ಲು ಹಾಕಲು ಹೋದ ಸಂದರ್ಭ ಬಸವ ಕೊಂಬಿನಿಂದ ತಿವಿದಿದ್ದ ಎಂದು ತಿಳಿದು ಬಂದಿದೆ. ತಲೆ ಭಾಗಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇವರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Be the first to comment

Leave a Reply

Your email address will not be published.


*