ಪೊಲೀಸ್ ಲೈನ್ ಬಾಬಾ ಫ್ರೆಂಡ್ಸ್‍ನ ಹುಲಿವೇಷದ ಕಾರ್ಯಕ್ರಮದಲ್ಲಿ ಸುರೇಶ್ ಶೆಟ್ಟಿ ಎಯ್ಯಾಡಿ ಭಾಗಿ -ಎನ್.ಎಂ.ಸಿ ನ್ಯೂಸ್

ಮಂಗಳೂರು: ದಸರಾ ಬಂತೆದರೆ ಕರಾವಳಿಗೆ ಹೊಸ ಮೆರುಗು ಬರುತ್ತೆ. ಈ ಭಾಗದ ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರಗಳು ಒಂದು ಕಡೆಯಾದ್ರೆ ಇನ್ನೊಂದೆಡೆ ತಾಸೆಯ ಪೆಟ್ಟಿಗೆ ಹುಲಿ, ಶಾರ್ದೂಲ, ಕರಡಿ ಹೀಗೆ ನಾನಾ ವೇಷಗಳ ಕುಣಿತ ನೋಡುವುದು ಕಣ್ಣಿಗೆ ಹಬ್ಬ.ಅಂತೆಯೇ ಬಾಬಾ ಫ್ರೆಂಡ್ಸ್ ಪೊಲೀಸ್ ಲೈನ್ ಇವರ 35ನೇ ವರ್ಷದ ಹುಲಿವೇಷವು ಅದ್ಧೂರಿಯಾಗಿ ನಡೆದಿದೆ. ನಾಗೇಶ್ ಪಿ.ಎಸ್ ನೇತೃತ್ವದಲ್ಲಿ ಬಾಬಾ ಫ್ರೆಂಡ್ಸ್‍ನ ಶ್ರೀ ಶಾರದಾ ಹುಲಿಯು ಎಲ್ಲರನ್ನು ರಂಜಿಸಿತು.

ಕಾರ್ ಸ್ಟ್ರೀಟ್‍ನ ವೆಂಕಟರಮಣ ದೇವಸ್ಥಾನದ ದಸರಾ ಮೆರವಣಿಗೆಯಲ್ಲಿ ಇವರ ಟ್ಯಾಬ್ಲೋ ಆಕರ್ಷಣೇಯ ಕೇಂದ್ರವಾಗಿತ್ತು.  ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರಾದ ಸುರೇಶ್ ಶೆಟ್ಟಿ ಯೆಯ್ಯಾಡಿ, ದಲಿತ ಸಂಘರ್ಷ ಸಮಿತಿಯ ಪಿ. ಕೇಶವ, ಮಾಜಿ ನಾಮೀನೇಟ್ ಕಾರ್ಪೊರೇಟರ್ ದಿನೇಶ್ ಪಿ.ಎಸ್, ಹಿರಿಯರಾದ ಸುಬ್ರಹ್ಮಣ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*