ಕರ್ನಾಟಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಲಹಾ ಸಮಿತಿ ಸದಸ್ಯರಾಗಿ ರಹೀಂ ಉಚ್ಚಿಲ್ ನೇಮಕ – ಎನ್.ಎಂ.ಸಿ ನ್ಯೂಸ್

ಬೆಂಗಳೂರು: ರಾಜ್ಯ ಸರ್ಕಾರ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಪ್ರತಿವರ್ಷ ಕನ್ನಡ ರಾಜ್ಯೋತ್ಸವದಂದು ನೀಡುವ ಪ್ರಶಸ್ತಿಯ ಕುರಿತು ರಚಿಸಿರುವ ಸಲಹಾ ಸಮಿತಿಗೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ರಹೀಂ ಉಚ್ಚಿಲ್ ರವರನ್ನು ಕರ್ನಾಟಕ ಸರಕಾರ ನೇಮಕ ಮಾಡಿದೆ. ರಾಜ್ಯದ ವಿವಿಧ ಕ್ಷೇತ್ರದ ಹದಿನೇಳು ಮಂದಿ ಗಣ್ಯರನ್ನೊಳಗೊಂಡ ಸಮಿತಿ ಇದಾಗಿದ್ದು ದಿನಾಂಕ 12 ರಂದು ಕನ್ನಡ ಸಂಸ್ಕೃತ ಇಲಾಖೆಯ ಸಚಿವರ ಅಧ್ಯಕ್ಷತೆಯಲ್ಲಿ ಪ್ರಥಮ ಸಭೆ ಬೆಂಗಳೂರಿನ ಕುಮಾರಕೃಪದಲ್ಲಿ ಜರಗಲಿದೆ.

ಬ್ಯಾರಿ ಭಾಷೆಯ ಪ್ರಥಮ ಚಲನಚಿತ್ರ ಮಾಮಿ ಮರ್ಮೋಲ್ ಇದರ ಕತೆ ಸಾಹಿತ್ಯ ಸಂಭಾಷಣೆ ಹಾಗೂ ನಿರ್ದೇಶನ ಮಾಡಿ ನಟಿಸಿರುವ ರಹೀಂ ಉಚ್ಚಿಲ್ ಹಲವಾರು ಬ್ಯಾರಿ ನಾಟಕವನ್ನು ರಚಿಸಿ ನಿರ್ದೇಶಿಸಿರುವ ಇವರು ಸುಮಾರು ಹತ್ತು ವರ್ಷಗಳ ಕಾಲ ದೃಶ್ಯ ಹಾಗೂ ಪತ್ರಿಕಾ ಮಾಧ್ಯಮದಲ್ಲೂ ಸೇವೆ ಸಲ್ಲಿಸಿದ್ದು, ಪ್ರಸಕ್ತ ಭಾರತೀಯ ಜನತಾ ಪಾರ್ಟಿಯ ಅಲ್ಪಸಂಖ್ಯಾತ ಮೋರ್ಚದ ರಾಜ್ಯ ಉಪಾಧ್ಯಕ್ಷರಾಗಿ ಎರಡನೇ ಅವಧಿಗೆ ಸೇವೆ ಸಲ್ಲಿಸುತ್ತಿದ್ದಾರೆ.
ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಸ್ಥಾಪಕ ಕಾರ್ಯದರ್ಶಿಯಾಗಿ, ಬ್ಯಾರಿ ಸಾಹಿತ್ಯ ಸಮ್ಮೇಳನದ ಕಾರ್ಯದರ್ಶಿಯಾಗಿ, ಜಿಲ್ಲಾ ವಕ್ಫ್ ಸಲಹಾ ಸಮಿತಿ ಸೇರಿದಂತೆ ಹಲವಾರು ಸಾಮಾಜಿಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಂಘಟನೆಗಳಲ್ಲಿ ಪದಾಧಿಕಾರಿಯಾಗಿಯೂ ರಹೀಂ ಉಚ್ಚಿಲ್ ಸೇವೆ ಸಲ್ಲಿಸಿದ್ದಾರೆ.

Be the first to comment

Leave a Reply

Your email address will not be published.


*