ಮಾರಿಯಮ್ಮ ಮಹಿಷಮರ್ಧಿನಿ ಕ್ಷೇತ್ರದಲ್ಲಿ ಅದ್ಧೂರಿ ಮೆರವಣಿಗೆ; ಮನರಂಜಿಸಿದ ವಿವಿಧ ರೀತಿಯ ಟ್ಯಾಬ್ಲೋ -ಎನ್.ಎಂ.ಸಿ ನ್ಯೂಸ್

ಮಂಗಳೂರು: ನಾಡಿನೆಲ್ಲೆಡೆ ದಸರಾ ಸಂಭ್ರಮ ಮೇಳೈಸಿದ್ದು ಕಡಲ ನಗರಿ ಮಂಗಳೂರಿನ ಹಲವು ದೇವಸ್ಥಾನಗಳಲ್ಲಿ ವೈಭವದಿಂದ ಪೂಜೆ ಪುನಸ್ಕಾರಗಳು ನಡೆಯುತ್ತಿದೆ. ಅಂತೆಯೇ ನಗರದ ಬೋಳಾರದಲ್ಲಿರುವ ಮಾರಿಯಮ್ಮ ಮಹಿಷಮರ್ಧಿನಿ ಕ್ಷೇತ್ರದ ಮೆರವಣಿಗೆ ನಿನ್ನೆ ರಾತ್ರಿ ಅದ್ಧೂರಿಯಾಗಿ ಸಮಾಪನಗೊಂಡಿತು. ಈ ಅದ್ಧೂರಿ ಮೆರವಣಿಗೆಯು ಹಲವು ವಿಶೇಷತೆಗಳ ಆಗರವಾಗಿತ್ತು.

ಸರ್ವ ಧರ್ಮ ಸಹಿಷ್ಣುತೆಗೆ ಸಾಕ್ಷಿಯಾದ ಮಂಗಳೂರು ಫ್ರೆಂಡ್ಸ್ ಟೈಗರ್ಸ್

ಮುಳಿಹಿತ್ಲುವಿನ ಮಂಗಳೂರು ಫ್ರೆಂಡ್ಸ್ ಟೈಗರ್ಸ್ ತಂಡದ ಮೂರನೇ ವರ್ಷದ ಕಲಾಕಾಣಿಕೆ ದಸರಾ ಹುಲಿಯು ವಿಶೇಷತೆಯಿಂದ ಕೂಡಿತ್ತು. ಎಲ್ಲಾ ಧರ್ಮದ ಯುವಕರು ಒಗ್ಗೂಡಿ ಮುನ್ನೆಸುವ ಈ ಯುವಕರ ತಂಡದ ಈ ಸಾರಿಯ ದಸರಾ ಹುಲಿಯಲ್ಲಿ ಪೌರಾಣಿಕ ಕಥಾ ಹಂದರವನ್ನು ಸೇರಿಸಿ ಮಹಿಷಾಸುರ ವಧೆಯ ಜೊತೆ ಹುಲಿನೃತ್ಯವನ್ನು ಜೋಡನೆ ಮಾಡಲಾಗಿತ್ತು. ಈ ವಿನೂತನ ಪ್ರಯತ್ನ ಎಲ್ಲರ ಮೆಚ್ಚುಗೆಗೆ ಕಾರಣವಾಯ್ತು.

ಟೀಮ್ ಬೋಳಾರ್


ಟೀಮ್ ಬೋಳಾರ್ ವತಿಯಿಂದ ದೇಶಭಕ್ತಿ ಸಾರುವ ಮಿಲಿಟರಿ ಪಡೆ ಹಾಗೂ ಗಜಗಾತ್ರದ ಡೈನೋಸಾರ್ ಎಲ್ಲರನ್ನು ಮನರಂಜಿಸಿತು.

ಟೀಮ್ ಬಿಗ್ ಬಾಸ್


ಇನ್ನು ಟೀಮ್ ಬಿಗ್ ಬಾಸ್ ವತಿಯಿಂದ ಡ್ಯಾನ್ಸ್ ಟ್ಯಾಬ್ಲೋ ಆಕರ್ಷಣೆಯ ಕೇಂದ್ರವಾಗಿತ್ತು.

ಅಂತೆಯೇ ನಾನಾ ತಂಡಗಳ ವತಿಯಿಂದ ವಿವಿಧ ರೀತಿಯ ಟ್ಯಾಬ್ಲೋ ಗಳು ಎಲ್ಲರನ್ನು ರಂಜಿಸಿದವು.

Be the first to comment

Leave a Reply

Your email address will not be published.


*