ಮೈಸೂರು ಅರಮನೆಯಲ್ಲಿ ಕಳೆಗಟ್ಟಿದ ಆಯುಧಾ ಪೂಜೆ – ಎನ್.ಎಂ.ಸಿ ನ್ಯೂಸ್

ಮೈಸೂರು: ರಾಜ್ಯದಾದ್ಯಂತ ಇಂದು ಆಯುಧಾ ಪೂಜೆಯ ಸಂಭ್ರಮ ಕಳೆಗಟ್ಟಿದೆ. ಅಂತೆಯೇ ಮೈಸೂರು ಅರಮನೆಯಲ್ಲೂ ಆಯೂಧ ಪೂಜೆ ಬಲು ವೈಭವದಿಂದ ನಡೆದಿದೆ. ಮಹಾರಾಜ ಯದುವಿರ್ ಕೃಷ್ಣರಾಜ ಚಾಮರಾಜ ಒಡೆಯರ್ ಅವರು ಅರಮನೆಯ ಖಾಸಗಿ ಆಯುಧಗಳಿಗೆ ಪೂಜೆ ನೆರವೇರಿಸಿದರು. ದರ್ಬಾರ್ ರಾಜಪೋಷಾಕು ಧರಿಸಿ ಕಲ್ಯಾಣ ಮಂಟಪದಲ್ಲಿ ಪೂಜೆ ನೆರವೇರಿಸಿದರು.

ನಂತರ ಮಹಾರಾಜರು ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುಗಳಿಗೆ ಪೂಜೆ ಸಲ್ಲಿಸಿದರು. ವಾದ್ಯಘೋಷ, ಪೊಲೀಸ್ ಬ್ಯಾಂಡ್ ಸಂಗೀತದೊಂದಿಗೆ ಪೂಜಾ ಕಾರ್ಯ ನಡೆಯಿತು. ರಾಜಮಾತೆ ಪ್ರಮೋದಾ ದೇವಿ, ತ್ರಿಷಿಕಾ ಕುಮಾರಿ ಒಡೆಯರ್, ಪುತ್ರ ಆದ್ಯವೀರ್ ಭಾಗವಹಿಸಿದರು.

Be the first to comment

Leave a Reply

Your email address will not be published.


*