ಮೋದಿ ಮತ್ತು ಬಿಜೆಪಿ ಪಕ್ಷಕ್ಕೆ ಸೇರೋ ಬಗ್ಗೆ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಹೇಳಿದ್ದೇನು..? – ಎನ್.ಎಂ.ಸಿ ನ್ಯೂಸ್

ಕುವೈತ್ : ಪ್ರಧಾನಿ ನರೇಂದ್ರ ಮೋದಿಯಿಂದ ಭಾರತದಲ್ಲಿ ಅಭಿವೃದ್ಧಿ ಸುನಾಮಿ ಶುರುವಾಗಿದೆ ಎಂದು ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಹೇಳಿದ್ದಾರೆ. ಕುವೈತ್‍ನಲ್ಲಿ ಭಾರತೀಯ ಪ್ರವಾಸಿ ಪರಿಷತ್ ಹಮ್ಮಿಕೊಂಡಿದ್ದ ಕನ್ನಡ ಡಿಂಡಿಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸುನಾಮಿ ಬಂದಾಗ ಭೂಮಿಯ ಖಂಡಗಳಲ್ಲಿ ಬದಲಾವಣೆಯಾಗುತ್ತದೆ. ಅದೇ ರೀತಿ ದೊಡ್ಡ ನಾಯಕರೊಬ್ಬರು ಉದಯಿಸಿ ಬಂದಾಗ, ಅಂತಹ ಬದಲಾವಣೆಗಳನ್ನು ನಾವು ಕಾಣಬಹುದು. ಹಿಂದೆ ಚಕ್ರವರ್ತಿ ಅಶೋಕ, ಚಂದ್ರಗುಪ್ತ ಮೌರ್ಯ, ಬಾಬರ್, ಅಕ್ಬರ್ ಭಾರತವನ್ನು ಆಳಿದಾಗ ಈ ಥರ ಬದಲಾವಣೆಗಳಿಗೆ ದೇಶ ಸಾಕ್ಷಿ ಆಗಿತ್ತು ಎಂದರು.

ನಮ್ಮ ದೇಶದ ಪ್ರಧಾನಿ ಎಲ್ಲಿಯೇ ಹೋದರೂ ಅವರಿಗೆ ಅಭೂತಪುರ್ವ ಸ್ವಾಗತ ದೊರೆಯುತ್ತದೆ. ಇದಕ್ಕೆ ಉದಾಹರಣೆ ಇತ್ತೀಚೆಗೆ ನಡೆದ ಹ್ಯೂಸ್ಟನ್ ನಲ್ಲಿ ನಡೆದ ಹೌಡಿ ಮೋದಿ ಕಾರ್ಯಕ್ರಮ ಎಂದರು. ಇನ್ನು ಅಣ್ಣಾಮಲೈ ಅವರು ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಅವರು ಬಿಜೆಪಿ ಪಕ್ಷಕ್ಕೆ ಸೇರಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತಿತ್ತು, ಆದರೆ ಈ ಬಗ್ಗೆ ಅವರು ನಿರಾಕರಣೆ ಮಾಡಿ, ಕಾಲವೇ ಎಲ್ಲದಕ್ಕೂ ಉತ್ತರ ನೀಡುತ್ತದೆ ಅನ್ನೋ ರೀತಿ ಹೇಳಿದ್ದರು. ಇದಲ್ಲದೇ ಈ ಮತ್ತೆ ಪ್ರಧಾನಿ ಮೋದಿಯವರ ಪರವಾಗಿ ಮಾತನಾಡಿರುವುದು ಕೂಡ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.

Be the first to comment

Leave a Reply

Your email address will not be published.


*