ರಾಜ್ಯವನ್ನು ವೈರಿಗಳ ರಾಜ್ಯ ಎಂದು ಕೇಂದ್ರ ಪರಿಗಣಿಸಿ ತಿರಸ್ಕಾರ ಮಾಡಿರುವುದು ಸರಿಯಲ್ಲ; ಯುಟಿ ಖಾದರ್ -ಎನ್.ಎಮ್.ಸಿ ನ್ಯೂಸ್

ಮಂಗಳೂರು ದಸರಾವನ್ನು ಅತ್ಯಂತ ವೈಭವದಿಂದ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಈ ಹಬ್ಬವನ್ನು ಏಕತೆಯಿಂದ ಆಚರಿಸಿಕೊಂಡು ಹೋಗಿ ಎಂದು ಶಾಸಕರಾದ ಯು ಟಿ ಖಾದರ್ ಕರೆ ನೀಡಿದ್ದಾರೆ. ನಗರದ ಸಕ್ರ್ಯೂಟ್ ಹೌಸ್‍ನಲ್ಲಿ ನಡೆದ ಪ್ರತಿಕಾಗೋಷ್ಟಿಯಲ್ಲಿ ಮಾತನಾಡಿದ ಯು.ಟಿ ಖಾದರ್,ಶ್ರೀ ಕ್ಷೇತ್ರ ಗೋಕರ್ಣನಾಥ ಮತ್ತು ಆಡಳಿತ ಮಂಡಳಿ ಅದ್ಧೂರಿಯಾಗಿ ಮಂಗಳೂರು ದಸರಾವನ್ನು ಕೈಗೊಳ್ಳುವಾಗ ಸಂಪೂರ್ಣ ಸಹಕಾರ ನೀಡುವ ಜವಾಬ್ದಾರಿ ಜಿಲ್ಲಾಡಳಿತದ ಹೊಣೆ. ಮಂಗಳೂರು ಮಾತ್ರವಲ್ಲದೆ ಬೇರೆ ಬೇರೆ ಕಡೆಗಳಿಂದ ಬರುವ ಜನರು ಸಂತೋಷಗೊಳಿಸುವುದು ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳ ಹೊಣೆ. ನಗರದ ಪ್ರಮುಖ ರಸ್ತೆಗಳ ಸ್ಥಿತಿ ಕೆಟ್ಟುಹೋಗಿದೆ. ನಂತೂರು ಜಂಕ್ಷನ್ ವಾಹನ ಸರಿಯಾಗಿ ಹೋಗಲು ಸಾಧ್ಯವಿಲ್ಲ. ಪಂಪ್‍ವೆಲ್, ಮಹಾಕಾಳಿ ಪಡ್ಪು ರಸ್ತೆ ದುರಸ್ತಿ ಕಾರ್ಯ ನಡೆಯಬೇಕು. ಕಳೆದ ಬಾರಿ ರಸ್ತೆ ದುರಸ್ತಿಗೆ ಒತ್ತು ನೀಡಿದ್ದೆ. ಈ ಬಾರಿಯು ರಸ್ತೆಯನ್ನು ದುರಸ್ತಿ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಅಂತೆಯೇ ರಾತ್ರಿ ವೇಳೆ ಒಳ ರಸ್ತೆಗಳಲ್ಲಿ ಬೀದಿ ದೀಪ, ಕರೆಂಟ್ ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸಬೇಕು. ದಸರಾ ಸಮಯದಲ್ಲಿ ಎಮೆರ್‍ಜೆನ್ಸಿ ಹೆಲ್ತ್ ಸೆಂಟರ್ ತಾತ್ಕಾಲಿಕವಾಗಿ ರೂಪುಗೊಳ್ಳುವಂತೆ ನೋಡಿಕೊಳ್ಳಬೇಕೆಂದು ಒತ್ತಾಯಿಸಿದ್ರು. ಕೇಂದ್ರದಿಂದ ತಳಮಟ್ಟದವರೆಗೆ ಬಿಜೆಪಿ ಪಕ್ಷ ಆಡಳಿತದಲ್ಲಿದೆ. ಅಭಿವೃದ್ಧಿ ಕಾರ್ಯ ನಡೆಯಬೇಕು. ಮನಪಾದಲ್ಲಿ ಹಣಕಾಸಿನ ತೊಂದರೆ ಇಲ್ಲ. ಖರ್ಚು ಜಾಸ್ತಿಲ್ಲ ಆದರೆ ನಪ್ರತಿನಿಧಿಗಳು ಮುಂದಾಗಬೇಕು ಎಂದು ಆಕ್ರೋಶ ವ್ಯಕ್ತ ಪಡಿಸಿದ್ರು. 

ಇನ್ನು ಇದೇ ವೇಳೆ ಪ್ರಕೃತಿ ವಿಕೋಪದಿಂದ ಉಂಟಾದ ನಷ್ಟಕ್ಕೆ ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆ ಮಾಡಿಲ್ಲ. ಕರ್ನಾಟಕದ ವರದಿಯನ್ನು ಕೇಂದ್ರ ತಿರಸ್ಕರಿಸಿದೆ. ಮುಖ್ಯಮಂತ್ರಿಗೆ ಮಾತ್ರ ಅವಮಾನವಲ್ಲ. ವರದಿ ಮಾಡಲು ಕಷ್ಟಪಟ್ಟ ಪ್ರತಿ ಅಧಿಕಾರಿ ಹಾಗೂ ಪರಿಹಾರದ ಭರವಸೆಯಿಟ್ಟ ಪ್ರತಿ ಕನ್ನಡಿಗನಿಗೂ ಅವಮಾನ ಎಂದು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ರು.ಇಲ್ಲಿಯ ತನಕ ಇಂದೂ ನಾಳೆ ನಾಳಿದ್ದು ಎಂದು ಪರಿಹಾರ ನೀಡುವ ಕಾರ್ಯ ಮುಂದುವರಿದಿಲ್ಲ. ರಾಜ್ಯವನ್ನು ವೈರಿಗಳ ರಾಜ್ಯ ಎಂದು ಪರಿಗಣಿಸಿತಿರಸ್ಕಾರ ಮಾಡಿರುವುದು ಸರಿಯಲ್ಲ. ಕೇಂದ್ರದಿಂದ ಬಂದ ಅಧಿಕಾರಿಗಳ ವರದಿಯನ್ನು ಪರಿಗಣಿಸಬೇಕಾಗಿತ್ತು. ಈ ತಿರಸ್ಕಾರವನ್ನು ನಾಡಿನ ಜನತೆ ಸಹಿಸುವುದಿಲ್ಲ. ಆಡಳಿತ ಪಕ್ಷ ಕೂಡಸಹಿಸುವುದಿಲ್ಲ. ಈ ರೀತಿಯ ಅವಮಾನ ಸಹಿಸಿಕೊಂಡು ರಾಜ್ಯದಲ್ಲಿ ಬಿಜೆಪಿ ಆಡಳಿತ ನಡೆಸಬೇಕಾ? ಜನರ ಸ್ವಾಭಿಮಾನ ಉಳಿಸಿಕೊಳ್ಳಲು ರಾಜೀನಾಮೆ ಕೊಡಬೇಕಾ ಎಂಬುವುದನ್ನು ಆಲೋಚಿಸಬೇಕು. ಹಲವಾರು ಮಂದಿ ಮನೆ ಮಠ ಕಳೆದುಕೊಂಡಿದ್ದಾರೆ. ಸಾವು ನೋವು ಸಂಭವಿಸಿದೆ. ಅಧಿಕಾರ ಸ್ವೀಕರಿಸುವ ವೇಳೆ ಸಿಎಂ ಕರ್ನಾಟಕದ ಖಜಾನೆ ತುಂಬಿ ತುಳುಕುತ್ತಿದೆ. ಆದರೆ ನಿನ್ನೆ ಸಿಎಂ ಕರ್ನಾಟಕದ ಹಣ ಖಾಲಿಯಾಗಿದೆ. ಈ ದ್ವಂದ ಹೇಳಿಕೆಯಿಂದ ಜನರು ಗೊಂದಲಕ್ಕೀಡಾಗಿದ್ದಾರೆ. ಆದಷ್ಟು ಶೀಘ್ರ ಕರ್ನಾಟಕ ಹಣಕಾಸಿಗೆ ಸಂಬಂಧಪಟ್ಟಂತೆ ಆರ್ಥಿಕ ಸ್ಥಿತಿಯನ್ನು ಶ್ವೇತ ಪತ್ರದಲ್ಲಿ ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿದ್ರು.

ಈ ಸುದ್ದಿಗೋಷ್ಠಿಯಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ಮೋನು, ಹಿರಿಯ ಮುಖಂಡ ಈಶ್ವರ ಕುಲಾಲ್, ಜಿ. ಪಂ ಸದಸ್ಯೆ ಮಮತಾ ಗಟ್ಟಿ, ರಮೇಶ್ ಶೆಟ್ಟಿ, ದಿನೇಶ್ ಕುಂಪಲ, ಪದ್ಮನಾಭ ನರಿಂಗಾಣ ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*