ರೈತರು ಕೇಳಿದಷ್ಟು ಪರಿಹಾರ ಕೊಡಲು ಸಾಧ್ಯವಿಲ್ಲೆಂದ ಡಿಸಿಎಂ ಲಕ್ಷ್ಮಣ ಸವದಿ -ಎನ್.ಎಂ.ಸಿ ನ್ಯೂಸ್

ರೈತರು ಕೇಳಿದಷ್ಟು ನೆರೆ ಪರಿಹಾರವನ್ನು ಕೊಡಲು ಸಾಧ್ಯವಿಲ್ಲೆಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ನೆರೆ ಪರಿಹಾರಕ್ಕೆ ಮನವಿ ಮಾಡಿದ ರೈತರನ್ನು ಭೇಟಿಯಾಗಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮಣ ಸವದಿ ಹೀಗೆ ಹೇಳಿದ್ದಾರೆ.

ಎಕರೆಗೆ 50 ಸಾವಿರ ಕೊಡಿ, 1 ಲಕ್ಷ ಪರಿಹಾರ ಕೊಡಿ ಎಂದು ರೈತಾಪಿ ವರ್ಗ ಕೇಳುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೆರೆ ಪರಿಹಾರ ವಿತರಣೆ ಮಾರ್ಗಸೂಚಿ ತೆಗೆದುಬಿಡಿ ಎಂದು ಕೇಳುತ್ತಿದ್ದಾರೆ.

ರೈತರು ಕೇಳಿದಷ್ಟು ಪರಿಹಾರ ನೀಡಿದರೆ ನಾನೇ 1 ಕೋಟಿ ರೂಪಾಯಿ ತೆಗೆದುಕೊಳ್ಳಬೇಕಾಗುತ್ತದೆ ಎಂದಿದ್ದಾರೆ.

Be the first to comment

Leave a Reply

Your email address will not be published.


*