ಮೈಸೂರು ದಸರಾ; 65ನೇ ವನ್ಯಜೀವಿ ಸಪ್ತಾಹಕ್ಕೆ ಚಾಲನೆ- ಎನ್.ಎಂ.ಸಿ ನ್ಯೂಸ್

ವಿಶ್ವವಿಖ್ಯಾತ ಮೈಸೂರು ದಸರಾದ ಹಿನ್ನಲೆಯಲ್ಲಿ ಇಂದಿನಿಂದ 65ನೇ ವನ್ಯಜೀವಿ ಸಪ್ತಾಹ ಆಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಮೈಸೂರು ಅರಮನೆಯ ಬಲರಾಮ ದ್ವಾರದ ಬಳಿಯಲ್ಲಿ ನ್ಯಾಯಧೀಶ ದೇವಮಾನೆಯವರು ಹಸಿರು ನಿಶಾನೆ ತೋರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು. ವನ್ಯಜೀವಿಗಳ ರಕ್ಷಣೆಗಾಗಿ ಅರಿವು ಮುಡಿಸುವ ಕಾರ್ಯಕ್ರಮ ಇದಾಗಿದ್ದು ಇಂದಿನಿಂದ 7 ದಿನಗಳ ಕಾಲ ವನ್ಯಜೀವಿ ಸಪ್ತಾಹ ಆಚರಣೆ ನಡೆಯಲಿದೆ.

ದಸರಾ ಗಜಪಡೆಯೊಂದಿಗೆ ವನ್ಯಜೀವಿ ಸಪ್ತಾಹ ನಡೆಯಲಿದೆ. ವಿಜಯದಶಮಿಯ ದಿನ ಜಂಬೂ ಸವಾರಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ಗಜಪಡೆಯೊಂದಿಗೆ ಮೆರವಣಿಗೆಯಲ್ಲಿ ಸಾಗಿದ ಶಾಲಾಮಕ್ಕಳಿಗೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಸಾಥ್ ನೀಡಲಿದ್ದಾರೆ.

Be the first to comment

Leave a Reply

Your email address will not be published.


*