ಶರನ್ನವರಾತ್ರಿಯ ಸಮಯದಲ್ಲಿ ಚಿನ್ನ ಖರೀದಿಸುವವರಿಗೆ ಸಿಹಿ ಸುದ್ದಿ; ಇಳಿಕೆಯಾದ ಚಿನ್ನದ ಬೆಲೆ – ಎನ್. ಎಂ.ಸಿ ನ್ಯೂಸ್

ಹಬ್ಬದ ಸಂಭ್ರಮದ ನಡುವೆ ಬಂಗಾರ ಕೊಂಡುಕೊಳ್ಳುವವರಿಗೆ ಖುಷಿ ಸುದ್ದಿ ಸಿಕ್ಕಿದೆ. ವಾರದ ಮೊದಲ ದಿನ ಹಾಗೂ ತಿಂಗಳ ಅಂತ್ಯದ ದಿನದಲ್ಲಿ ಚಿನ್ನದ ಬೆಲೆ ಅಗ್ಗವಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 10 ಗ್ರಾಂ ಬಂಗಾರದ ಬೆಲೆ 240 ರೂಪಾಯಿ ಇಳಿಕೆಯಾಗಿದೆ. 1 ಕೆಜಿ ಬೆಳ್ಳಿ ಬೆಲೆ 775 ರೂಪಾಯಿ ಇಳಿಕೆ ಕಂಡಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ದುರ್ಬಲ ಬೆಳವಣಿಗೆ ಕಾರಣ ಚಿನ್ನದ ಬೆಲೆ ಇಳಿಕೆಗೊಂಡಿದೆ. ಪ್ರತಿ 10 ಗ್ರಾಂ ಚಿನ್ನದ ಬೆಲೆಯು 240 ಇಳಿಕೆ ಕಂಡು 38.530 ರೂಪಾಯಿಯಾಗಿದೆ. ಅಂತೆಯೇ ಪ್ರತಿ 1 ಕೆಜಿ ಬೆಳ್ಳಿ ಬೆಲೆಯು 775 ರೂಪಾಯಿ ಇಳಿಕೆಗೊಂಡು 45.705 ರೂಪಾಯಿಯಾಗಿದೆ.

Be the first to comment

Leave a Reply

Your email address will not be published.


*