ಸಿದ್ದಕಟ್ಟೆ ವಲಯ ಸಾರ್ವಜನಿಕ ಶ್ರೀ ಶಾರದೋತ್ಸವ ಆಚರಣಾ ಸಮಿತಿಯ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ಮಾಜಿ ಸಚಿವ ರೈ

ದಸರಾ ಸಂಭ್ರಮಕ್ಕೆ ಇನ್ನೇನು ಕೆಲವು ದಿನಗಳು ಮಾತ್ರ ಬಾಕಿ ಇದೆ ..ಈ ಹಿನ್ನಲೆ ಶಾರದೋತ್ಸವಕ್ಕೆ ಎಲ್ಲಾ ತಯಾರಿ ಭರದಿಂದ ಸಾಗುತ್ತಿದ್ದು, ಇತ್ತ ದ.ಕ ಜಿಲ್ಲೆಯಲ್ಲೂ ಜೋರಾಗೆ ಪೂರ್ವ ತಯಾರಿ ನಡೆಯುತ್ತಿದೆ. ಇನ್ನು ಸಾರ್ವಜನಿಕ ಶ್ರೀ ಶಾರದೋತ್ಸವ ಆಚರಣಾ ಸಮಿತಿ ಸಿದ್ದಕಟ್ಟೆ ವಲಯ , ಇದರ ನೇತೃತ್ವದಲ್ಲಿ ಪ್ರಥಮ ವರ್ಷದ ಶ್ರೀ ಶಾರದೋತ್ಸವದ ಪ್ರಥಮ ಸಭೆ ಹಾಗೂ ಆಮಂತ್ರಣ ಬಿಡುಗಡೆ ಕಾರ್ಯಕ್ರಮ ಗುರುವಾರ ಜರುಗಿದೆ.ಇನ್ನು ಆಮಂತ್ರಣ ಪತ್ರಿಕೆಯನ್ನು ಮಾಜಿ ಸಚಿವರು ಹಾಗೂ ಸಮಿತಿ ಗೌರವಾಧ್ಯಕ್ಷರಾದ ಶ್ರೀ ಬಿ ರಮಾನಾಥ ರೈ ಬಿಡುಗಡೆಗೊಳಿಸಿದ್ದಾರೆ. ಈ ಸಂದರ್ಭದಲ್ಲಿಅಧ್ಯಕ್ಷರಾದ ಲೋಕೇಶ್ ಶೆಟ್ಟಿ ಮೊಯಿಲೊಟ್ಟು, ಶಾರದೋತ್ಸವ ಸಮಿತಿಯ ಪ್ರದಾನ ಸಂಚಾಲಕರಾದ ಜಗದೀಶ್ ಕೊಯಿಲ.ಪ್ರದಾನ ಕಾರ್ಯದರ್ಶಿಗಳಾದ ಶ್ರೀ ರಮೇಶ್ ಎಂ ಮಂಜಿಲ .ಕೋಶಾಧಿಕಾರಿಗಳಾದ ಶ್ರೀ ಉಮೇಶ್ ಹಿಂಗಣಿ,ಸಂಘಟನಾ ಕಾರ್ಯದರ್ಶಿಗಳಾದ ದಿನೇಶ್ ಸುಂದರ ಶಾಂತಿ,ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮಶೇಖರ್ ಜೈನ್ ,ಬಂಟ್ವಾಳ ಬ್ಲಾಕ್ ಅಧ್ಯಕ್ಷರಾದ ಬೇಬಿ ಕುಂದರ್ ,ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ.ಮಾಯಿಲಪ್ಪ ಸಾಲಿಯಾನ್,ಮೊದಲಾದವರು ಉಪಸ್ಥಿತರಿದ್ದರು .

Be the first to comment

Leave a Reply

Your email address will not be published.


*