ಹೆತ್ತ ಮಕ್ಕಳಿಗಾಗಿ ಚಡಪಡಿಸುತ್ತಿದೆ ತಾಯಿ ಹೃದಯ ;ಬಾರ್ ಡ್ಯಾನ್ಸರ್‌ನ ನೋವಿನ ಕಥೆ ಇಲ್ಲಿದೆ ಕೇಳಿ

 

“ಒಬ್ಬ ಹೆಂಗಸು ತಾನು ಹೆತ್ತ ಮಗುವಿನ ಮೇಲೆ ಕರುಣೆಯಿಡದೆ ತನ್ನ ಮೊಲೆಕೂಸನ್ನು ಮರೆತಾಳೇ?” ಅದೆಷ್ಟೋ ಕಡು ಬಡತನದಲ್ಲಿದ್ದರೂ ತಾಯಿಯ ಪ್ರೀತಿ ಇನ್ನಾರಿಗಾದರೂ ಕೊಡಲು ಸಾಧ್ಯವೇ? ಆಕೆಯ ಮಮತೆಯ ಮಡಿಲಿನಲ್ಲಿ ಬೆಳೆದ ಮಕ್ಕಳು ಅದೃಷ್ಟವಂತರೂ.ಎಂತಹ ಕಷ್ಟದಲ್ಲಿದ್ದರೂ ತನ್ನ ಕರುಳ ಬಳ್ಳಿಯನ್ನ ಮರೆಯಲು ಸಾಧ್ಯವಿಲ್ಲ.ಯಾಕೀ ಮಾತು ಹೇಳುತ್ತಿದ್ದೇವೆ ಎಂದರೆ ಇಲ್ಲೊಂದು ತಾಯಿ ತನ್ನ ಹೆತ್ತ ಮಕ್ಕಳ ಮುಖ ಕಾಣಲು ಒದ್ದಾಡುತ್ತಿದ್ದಾಳೆ.ಇದೊಂದು ಯಾವ ಜನ್ಮದ ಪಾಪವು ತಿಳಿಯದು,ನನ್ನ ಮಕ್ಕಳ ಮುಖ ನೋಡಲು ನನಗೆ ಆಗುತ್ತಿಲ್ಲ ಎಂದು ರೋಧಿಸುತ್ತಿದ್ದಾಳೆ.ಈಕೆಯ ಕರುಳ ಸಂಕಟ ನೋಡಿದರೆ ಎಂತಹ ಕಲ್ಲು ಹೃದಯವು ಕರಗಿ ಹೋಗುತ್ತದೆ.

ಹೌದು, ಈಕೆಯ ಹೆಸರು ರಮ್ಯ ವಿನಯ್.ಮೂಲತಃ ಬಿಹಾರದವರು.ಹಾಲುಗೆನ್ನೆಯ ಚೆಲುವ ಸೌಂದರ್ಯ ನೋಡಿ ಯಾರೊ ಪುಣ್ಯಾತ್ಮರು ಉದ್ಯೋಗ ಕೋಡಿಸ್ತೇವೆ ಅಂತಾ ಕೋಲ್ಕತ್ತಾಗೆ ಕರೆದುಕೊಂಡು ಹೋಗುತ್ತಾರೆ.ಆದರೆ ಅಲ್ಲಿ ನಡೆದದ್ದೆ ಬೇರೆ. ರಮ್ಯ ಲೈವ್ ಬ್ಯಾಂಡ್ ಎಂಬ ನರಕಕೋಪದೊಳಗೆ ಬೀಳುತ್ತಾಳೆ.ಇದ್ಯಾವುದು ಸಿನಿಮಾ ಕತೆ ಅಲ್ಲ.ನಿಜ ಜೀವನದಲ್ಲಿ ಆದ ರಿಯಲ್ ಸ್ಟೋರಿ.ಜೀವನೋಪಾಕ್ಕೆ ಬೇರೆ ದಾರಿಯಿಲ್ಲದ ರಮ್ಯ ಕೋಲ್ಕತ್ತಾ ಲೈವ್ ಬ್ಯಾಂಡ್‌ನಲ್ಲಿ ಬಾರ್ ಡ್ಯಾನ್ಸ್‌ರ್ ಆಗಿ ಕೆಲಸ ಮಾಡುತ್ತಾಳೆ.

ಇಷ್ಟಾದ ಮೇಲೆ ಈ ಹೊತ್ತಿಗೆ ಅಂದರೆ ಸುಮಾರು ೧೫ ವರ್ಷದ ಹಿಂದೆ ಕೊಲ್ಕತ್ತಾ ಲೈವ್ ಬ್ಯಾಂಡ್‌ನಲ್ಲಿ ಸುರ ಸುಂದರಾಗನ ಪರಿಚಯವಾಗುತ್ತೆ.ಆತನ ಹೆಸರು ವಿನಯ್ ರಾಜ್.ಇಬ್ಬರ ಪರಿಚಯ ಪ್ರೇಮಾಂಕುರವಾಗಿ ಬದಲಾಗುತ್ತದೆ.ಈತ ಮೂಲತಃ ಮೈಸೂರಿನವ.ರಮ್ಯನ್ನ ನೋಡಿದ್ದ ವಿನಯ್ ಫುಲ್ ಫಿದಾ ಆಗಿದ್ದ.ಅದ್ಯಾವುದೇ ಕಾರಣಕ್ಕೂ ಬಿಡಲು ತಯಾರಿರಲಿಲ್ಲ.ಕೊನೆಗೂ ಇಬ್ಬರ ಲವ್ ಸ್ಟೋರಿ ಮದುವೆ ಅನ್ನೋ ಚ್ಯಾಪ್ಟರ್‌ನಲ್ಲಿ ಆರಂಭವಾಗುತ್ತದೆ.

ವಿನಯ್ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಿಂದ ಬಂದವ.ಅಗರ್ಭ ಶ್ರೀಮಂತ.ವೃತ್ತಿಯಲ್ಲಿ ಇಂಜಿನಿಯರ್.ಈತ ಬಾರ್ ಡ್ಯಾನ್ಸರ್ ನ ರಿಜಿಸ್ಟರ್ ಮದುವೆ ಆದ ವಿಷಯ ತಿಳಿತ್ತಿದ್ದಂತೆ ಮನೆಯಿಂದ ವಿನಯ್‌ನ ಗೇಟ್ ಪಾಸ್ ಮಾಡ್ತಾರೆ.ಕೊನೆಗೂ ವಿನಯ್ ಅದೇಗೂ ಸರ್ಕಸ್ ಮಾಡಿ ಮನೆಯವರನ್ನ ಒಪ್ಪಿಸಿ ಬ್ರಾಹ್ಮಣ ಸಂಪ್ರದಾಯದಂತೆ ಬೆಂಗಳೂರಿನಲ್ಲಿ ಅಗ್ನಿ ಸಾಕ್ಷಿಯಾಗಿ ಮನೆಯವರ ಸಮ್ಮುಖದಲ್ಲಿ ಪುನಃ ಮದುವೆಯಾಗ್ತರೆ.ಮದುವೆಯಾಗಿ ಕೆಲವೇ ಸಮಯದಲ್ಲಿ ಮುದ್ದಾದ ಹೆಣ್ಣು ಮಕ್ಕಳು ಕೂಡ ಈ ದಂಪತಿಗೆ ಆಗುತ್ತದೆ.

ಸುಂದರ ಸಂಸರಾದ ಮುದ್ದು ಕತೆ ಇಲ್ಲಿಗೆ ಮುಗಿಯಲ್ಲ.ಇಲ್ಲೊಮದು ಟ್ವಿಸ್ಟ್ ಬರುತ್ತೆ.ಅದೆನೇಂದು ಹೇಳ್ತಿವಿ ಕೇಳಿ.ಇಷ್ಟರಲ್ಲೆ ವಿನಯ್ ದುಷ್ಚಟ್ಟಕ್ಕೆ ದಾಸನಾಗಿರುತ್ತಾನೆ.ಇತ್ತ ಗಂಡ. ಅತ್ತ ಅತ್ತೆ. ರಮ್ಯಳಿಗೆ ದೈನಂದಿಕ ಕಿರುಕುಳ ನೀಡಲು ಆರಂಭಿಸುತ್ತಾರೆ.ಇದರಿಂದ ಬೇಸತ್ತ ರಮ್ಯ ಕೆಲದಿನಗಳಿಗಾಗಿ ತವರು ಮನೆಗೆ ಹೋಗುತ್ತಾಳೆ.ಅಷ್ಟರಲ್ಲೆ ವಿನಯ್ ರಮ್ಯಳಿಗೆ ಡೈವರ್ಸ್ ಪೇಪರ್ ಕಳುಹಿಸಿ ಬಿಡುತ್ತಾನೆ.ದಿಕ್ಕು ತೋಚದ ರಮ್ಯ ಕಂಗಾಲಾಗುತ್ತಾಳೆ.ಸಂಸಾರದ ನೌಕೆ ಯಾವುದೂ ಬಿರುಗಾಳಿಗೆ ಸಿಕ್ಕಿ ಬೀಳುವ ಮೊದಲು ರಮ್ಯ ತನ್ನ ತಾಯಿಯೊಂದಿಗೆ ಪುಟ್ಟ ಮಕ್ಕಳನ್ನ ಕಟ್ಟಿಕೊಂಡು ವಿನಯ್‌ನ ಮನೆಗೆ ಬರುತ್ತಾಳೆ.

ಭರವಸೆಯ ಹೆಜ್ಜೆಯೊಂದಿಗೆ ಬಂದಿದ್ದ ರಮ್ಯಳಿಗೆ ಅಲ್ಲೊಂದು ಶಾಕ್ ಕಾದಿತ್ತು .ಸಪ್ತಪದಿ ತುಳಿದ ಪತಿರಾಯ ಹೆಂಡತಿಯನ್ನು ಮನೆಯಿಂದ ಹೊರಹಾಕುತ್ತಾನೆ.ದಾರಿಕಾಣದ ರಮ್ಯ ಪುಟ್ಟ ಮಗಳನ್ನು ಕಟ್ಟಿಕೊಂಡು ಪೊಲೀಸ್ ಠಾಣೆಗೆ ಬಂದು ನ್ಯಾಯ ಕೇಳುತ್ತಾಳೆ.ಅರಕ್ಷಕರ ಸಹಕಾರದಿಂದ ಮತ್ತೆ ರಮ್ಯ ತನ್ನ ಪತಿರಾಯನೊಂದಿಗೆ ಇರಲು ಪ್ರಾರಂಭಿಸುತ್ತಾಳೆ.

ಇಷ್ಟರಲ್ಲೆ ವಿನಯ್ zಕೈ ಕೊಡುವ ಎಲ್ಲಾ ಪ್ಲಾನ್ ಮಾಡಿಕೊಂಡಿದ್ದ.ಆದರೆ ಈ ಮಾಸ್ಟರ್ ಪ್ಲಾನ್ ನ ಅರಿವಿರದ ರಮ್ಯ ಪುನಃ ವಿನಯ್‌ನ ಮೋಸದ ಜಾಲಕ್ಕೆ ಸಿಲುಕುತ್ತಾಳೆ.ನಾನು ನಿನ್ನ ಬೇರೆ ಮನೆಯಲ್ಲಿ ಸುಖವಾಗಿರೋಣ ಅಂತ ಹೆಂಡ್ತಿನ ಕರೆದುಕೊಂಡು ಸಪರೇಟ್ ಮನೆ ಮಾಡ್ತಾನೆ.ಹೊಸ ಮನೆ ಸುಂದರ ಸಂಸಾರ ಎಂದು ಕನಸು ಕಂಡಿದ್ದ ರಮ್ಯಳಿಗೆ ಪತಿರಾಯ ಮತ್ತೊಮ್ಮೆ ಡ್ಯಾನ್ಸ್ ಬಾರ್ ಎಂಬ ನರಕದ ಅಡ್ಡಕ್ಕೆ ಸೇರಿಸುತ್ತಾನೆ.ಇಷ್ಟಾದರೂ ರಮ್ಯ ಸಹಿಸಿಕೊಂಡು ಸಂಸಾರ ಮಾಡುತ್ತಿದ್ದ ಸಹನಾಮಯಿ ಈಕೆ.

ಇದ್ದಕ್ಕಿದ್ದಾಗೆ ಒಂದು ದಿನ ವಿನಯ್ ರಮ್ಯಳನ್ನು ಆಕೆಯ ಸಹೋದರನ ರೂಂನಲ್ಲಿ ಬಿಟ್ಟು ಆಫೀಸ್ ಕೆಲಸದ ಮೇಲೆ ಸ್ವಲ್ಪ ಹೊತ್ತಿನ ನಂತರ ಬರುತ್ತೇನೆಂದು ಹೇಳಿಹೋಗ್ತಾನೆ. ಹೀಗೆ ಹೇಳಿ ಹೋದವ ಗ್ರೇಟ್ ಎಸ್ಕೇಪ್ ಆಗ್ತಾನೆ ನೋಡಿ ಈ ಖದೀಮ.ವಿನಯ್ ದಾರಿ ಕಾಯುತ್ತಿದ್ದ ರಮ್ಯಾಳಿಗೆ ಫೋನ್ ಸ್ವೀಚ್ ಆಫ್ ಬರುತ್ತಿತ್ತು.ವಿನಯ್ ಮನೆಗೆ ಹೋದ ರಮ್ಯಳಿಗೆ ಬಾಗಿಲು ತೆರೆಯಲೆ ಇಲ್ಲ.ದಿಕ್ಕು ತೋಚದ ರಮ್ಯ ಕಂಗಾಲಾಗುತ್ತಾಳೆ.

ಆತ್ಮವಿಶ್ವಾಸವೇ ಜೀವನವೆಂದು ಎರಡು ಹೆಣ್ಣು ಮಕ್ಕಳನ್ನ ಸಾಕಿ ಬದುಕು sಸಾಗಿಸುತ್ತಿದ್ದ ರಮ್ಯಳಿಗೆ ಮತ್ತೆ ವಿನಯ್ ಜೀವನದಲ್ಲಿ ಎಂಟ್ರಿ ಕೋಡ್ತಾನೆ.ಅಪರೂಪಕ್ಕೊಮ್ಮೆ ಬರುತ್ತಿದ್ದ ವಿನಯ್ ಒಂದು ದಿನ ಪುಟ್ಟ ಮಕ್ಕಳನ್ನ ಶಾಲೆಯಿಂದ ಕರೆದುಕೊಂಡು ಹೋಗೆ ಬಿಡುತ್ತಾನೆ.ಕೊನೆಗೂ ತನ್ನ ರಕ್ಕಸ ಬುದ್ಧಿ ತೋರಿಸ್ತಾನೆ ನೋಡಿ.ಇಲ್ಲಿಗೆ ರಮ್ಯ ಜೀವನದಲ್ಲಿ ಎಲ್ಲಾ ಕಳೆದುಕೊಂಡಿದ್ದಳು.

ಜೀವನದಲ್ಲಿ ಎಲ್ಲಾ ಕಳೆದುಕೊಂಡಿದ್ದ ರಮ್ಯ ಹೆತ್ತ ಮಕ್ಕಳ ಮಮತೆಯಲ್ಲಿ ಬದುಕಿಗೊಂದು ಆಶಾಕಿರಣವನ್ನ ಕಾಣುತ್ತಿದ್ದಳು.ಆದರೆ ವಿನಯನಿಲ್ಲದ ವಿನಯ್ ಆ ಪುಟ್ಟ ಮಕ್ಕಳನ್ನು ಕರೆದುಕೊಂಡು ಹೋಗಿದ್ದಾನೆ. ತನ್ನ ಕರುಳ ಕುಡಿಯನ್ನ ನೋಡುವ ಹಂಬಲದಲ್ಲಿ ಈ ತಾಯಿ ಸದಾ ಕಣ್ಣಿರಿಡುತ್ತಿದಾಳೆ.ಈ ಪ್ರಕರಣ ಕೋರ್ಟ್‌ನಲ್ಲಿದೆ.ಆದರೆ ಮಾತೃ ಹೃದಯ ಕೋರ್ಟ್ ತಿರ್ಪಿನವರೆಗೆ ತನ್ನ ಮಕ್ಕಳನ್ನ ನೋಡದೆ ಇರಲು ಹೇಗೆ ಸಾಧ್ಯ ಹೇಳಿ?

ಬಾರ್ ಡ್ಯಾನ್ಸ್ ವೃತ್ತಿ ಬದುಕಿಗೊಂದು ಆಧಾರ.ಇಲ್ಲಿ ಅದೆಷ್ಟೋ ಹೆಣ್ಣು ಮಕ್ಕಳು ಮೋಸದ ಜಾಲಕ್ಕೆ ಸಿಲುಕಿದವರು.ರಮ್ಯ ಇಂತಹ ಹೆಣ್ಣುಮಕ್ಕಳಲ್ಲಿ ಒಬ್ಬಳು.ಲವ್,ಸೆಕ್ಸ್,ಧೋಕಾ ರಮ್ಯ ಬದುಕಿನಲ್ಲೂ ಆಯಿತು.ವಿನಯ್ ರಮ್ಯ ಬಾಳಿನ ಆಶಾಕಿರಣವಾಗಿದ್ದ.ತನ್ನನ್ನು ಇಷ್ಟಪಟ್ಟಿದ್ದ ವಿನಯ್ ಬಾಳ ಸಂಗಾತಿಯಾಗಿ ತನ್ನಬಾಳಿನಲ್ಲಿ ಬೆಳಕಾಗುತ್ತಾನೆಂಬ ಭರವಸೆ ಹುಸಿಯಾಯಿತು.ಈ ನೊಂದ ಜೀವ ತನ್ನ ಮಕ್ಕಳಿಗಾಗಿ ಹಂಬಲಿಸುತ್ತಿದೆ.ಆದಷ್ಟು ಬೇಗ ರಮ್ಯಳ ಮಕ್ಕಳು ತಾಯಿಯ ಮಡಿಲು ಸೇರಲಿ ಎನ್ನುವುದೆ ನಮ್ಮ ಆಶಾಯ.

 

 

 

 

Be the first to comment

Leave a Reply

Your email address will not be published.


*