ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಉದ್ಘಾಟನಾ ಕಾರ್ಯಕ್ರಮ ;ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಬಗ್ಗೆ ಮಾತನಾಡಿದ ಮಾಜಿ ಸಚಿವ ರೈ

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಬಂಟ್ವಾಳ ಇದರ ವತಿಯಿಂದ ಬಂಟ್ವಾಳ ತಾಲ್ಲೂಕಿನ ಮಾಣಿಯ ಸಂತೆಕಟ್ಟೆಯಲ್ಲಿ ವಿಶೇಷ ಕಾರ್ಯಕ್ರಮವೊಂದು ಜರುಗಿದೆ.ಬಂಟ್ವಾಳ ತಾಲ್ಲೂಕಿನ ಮಾಣಿ ಎಂಬಲ್ಲಿ 49.19ಲಕ್ಷ ವೆಚ್ಚದಲ್ಲಿ ಹಾಗೂಮಣಿಲ್ಕೂರುಎಂಬಲ್ಲಿ ಸುಮಾರು 17.22ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಮುಚ್ಚು ಹರಾಜು ಕಟ್ಟೆ ಕಟ್ಟಡಗಳ ಉದ್ಘಾಟನೆ ಮತ್ತು ಗ್ರಾಮ ಪಂಚಾಯತ್ಗಳಿಗೆ ಹಸ್ತಾಂತರ ಕಾರ್ಯಕ್ರಮ ಜರುಗಿದೆ .ಅಂದಹಾಗೆ ಸಮಾರಂಭವನ್ನು ದೀಪ ಬೆಳಗಿ ಸೋದರ ಮೂಲಕ ಮಾಜಿ ಸಚಿವ ಬಿ ರಮಾನಾಥ್ ರೈ ಹಾಗೂ ಶಾಸಕ ರಾಜೇಶ್ ನಾಯಕ್ ಉದ್ಘಾಟಿಸಿದ್ದಾರೆ .ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ರೈ ಬಹುಗ್ರಾಮ ಕುಡಿಯುವ ಯೋಜನೆ ಮಂಜೂರು ಕಾರ್ಯಕ್ರಮವನ್ನು ನಮ್ಮದೇ ಸರ್ಕಾರ ನಡೆಸಿದ್ದು ಈ ಐದು ಯೋಜನೆಯನ್ನು ತರುವಲ್ಲಿ ಬಂಟ್ವಾಳ ತಾಲ್ಲೂಕು ಯಶಸ್ವಿಯಾಗಿದೆ ಅದಕ್ಕೆ ಸಾಕಷ್ಟು ನಾನು ಪ್ರಯತ್ನಿಸಿದ್ದು ,ಆ ಪ್ರಯತ್ನಕ್ಕೆ ಯಶಸ್ವಿ ಸಿಕ್ಕಿದೆ ಅಂತಾ ತಿಳಿಸಿದ್ರು .ಅದರಂತೆ ಬಂಟ್ವಾಳದಲ್ಲಿ ಪ್ರಾಂಗಣ ಆಗಬೇಕೆಂಬ ಬೇಡಿಕೆ ಕೂಡ ಬಹು ಜನರದ್ದು ಆಗಿತ್ತು ಆದ್ರೆ ಸ್ಥಳಾವಕಾಶದ ಕೊರತೆಯಿಂದ ಅದು ಈಡೇರಲಿಲ್ಲ ಎಂಬ ಮಾತನ್ನು ಕೂಡ ತಿಳಿಸಿದ್ದಾರೆ .ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ರಸ್ತೆಗಳಿಗೆ ಹೆಚ್ಚು ಬೇಡಿಕೆಯನ್ನು ಕೊಟ್ಟಿದ್ದಾರೆ ನಿರಂತರವಾಗಿ ಕೃಷಿ ಉತ್ಪನ್ನಮಾರುಕಟ್ಟೆಗೆ ಕೃಷಿಕರಿಗೆ ರಸ್ತೆಗೆ ಬೇಕಾದ ಹಣವನ್ನು ಹಂತ ಹಂತವಾಗಿ ಬೇರೆ ಬೇರೆ ರೀತಿಯಲ್ಲಿ ಸಮಿತಿ ನೀಡಿದೆ ಅಂತ ತಿಳಿಸಿದ್ದರು .ಏನೋ ಕಾರ್ಯಕ್ರಮದಲ್ಲಿ ಕೆ ಪದ್ಮನಾಭ ರೈ ‘ಮಾಜಿ ಸಚಿವ ಬಿ ರಮಾನಾಥ್ ರೈ ,ತಾಲ್ಲೂಕು ಪಂಚಾಯತ್ ಸದಸ್ಯರಾದ ಅಬ್ಬಾಸ್ ಅಲಿ ,ಚಂದ್ರಶೇಖರ ಪೂಜಾರಿ ‘ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮಶೇಖರ್ ಜೈನ್ ,ಶ್ರೀಮತಿ ಮಂಜುಳಾ ಮಾಧವ ಮಾವೆ ,ಶ್ರೀಮತಿ ಮಂಜುಳಾ ಕುಶಲ ಪೆರಾಜೆ ,ಶ್ರೀಮತಿ ಬೇಬಿ ಕೃಷ್ಣಪ್ಪ ,ಶ್ರೀ ನೇಮಿರಾಜ್ ರೈ ,ಶ್ರೀ ಹರಿಶ್ಚಂದ್ರ ಪೂಜಾರಿ ,ಶ್ರೀಮತಿ ಮಮತಾ ಎಸ್ ಶೆಟ್ಟಿ ‘ಶ್ರೀಮತಿ ಗೀತಾ ಶ್ರೀಧರ ಪೂಜಾರಿ ,ಶ್ರೀಮತಿ ಚಂಚಲಾಕ್ಷಿ ,ಮುಂತಾದವರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*