ಅರಬ್ ನೆಲದಲ್ಲಿ ಮಿಂಚಿದ ವೈದ್ಯಕೀಯ ವಿದ್ಯಾರ್ಥಿಗಳ ” ವೈಟ್ ಕೋಟ್ ಸೆರೆಮನಿ- ೨೦೧೯ “

ಅರಬ್ ನೆಲದಲ್ಲಿ ವೈದ್ಯಕೀಯ ರಂಗದ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗಾಗಿ ವಿಶೇಷ ಕಾರ್ಯಕ್ರಮವೊಂದು ಜರುಗಿದೆ. ಸೆ.೧೨ ನೇ ತಾರೀಖಿನಂದು ಗಲ್ಫ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ವೈಟ್ ಕೋಟ್ ಸೆರೆಮನಿ-೨೦೧೯ ಎಂಬ ಅರ್ಥಪೂರ್ಣ ಕಾರ್ಯಕ್ರಮ ಜರುಗಿದ್ದು ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇನ್ನು ಮುಂಜಾನೆ ೯ ಗಂಟೆಗೆ ಸರಿಯಾಗಿ ಸಮಾರಂಭ ಆರಂಭಗೊಂಡಿದ್ದು ಮುಖ್ಯ ಅತಿಥಿಯಾಗಿ ಗಲ್ಫ್ ಮೆಡಿಕಲ್ ಯುನಿವರ್ಸಿಟಿ , ತುಂಬೆ ಗ್ರೂಪ್‌ನ ಸಂಸ್ಥಾಪಕಾಧ್ಯಕ್ಷರಾದ ಡಾ. ತುಂಬೆ ಮೊಹಿದ್ದೀನ್ ಭಾಗಿಯಾಗಿದ್ದಾರೆ. ಇದರ ಜೊತೆ ಇದೇ ಸಮಾರಂಭಕ್ಕೆ ಇನ್ನಷ್ಟು ಮೆರಗು ನೀಡಿದ್ದು , ಗಲ್ಫ್ ಮೆಡಿಕಲ್ ಯುನಿವರ್ಸಿಟಿ ಅಜ್ಮಾನ್ , ಯುಎಇ ಇದರ ಕುಲಪತಿಯಾದ ಪ್ರೊ. ಹೊಸ್ಸಮ ಹಮ್ದಿ.ಇನ್ನು ಈ ಸಮಾರಂಭದಲ್ಲಿ ವೈದ್ಯಕೀಯ ರಂಗದ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡೋದರ ಜೊತೆಗೆ ಪ್ರಮಾಣವನ್ನು ಸ್ವೀಕರಿಸಲಾಯಿತು.

Be the first to comment

Leave a Reply

Your email address will not be published.


*