ವಿಶೇಷ ಕೈ ನೈಪುಣ್ಯತೆಯಿರುವವರು ವಿಶ್ವಕರ್ಮ ಸಮುದಾಯದವರು – ಮಾಜಿ ಸಚಿವ ರೈ

ಬಂಟ್ವಾಳ ತಾಲೂಕು ಅಮ್ಮ್ತಡಿ ಗ್ರಾಮ ಅಜೆಕಾಲದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ “ವಿಶ್ವಕರ್ಮ ಸಮುದಾಯ ಭವನ “ದಲ್ಲಿ, ವಿಶ್ವಕರ್ಮ ಸಾಮಾಜಿಕ ಸೇವಾ ಸಂಘ ಜೋಡುಮಾರ್ಗ ಇದರ ೨೬ ನೇ ವರ್ಷದ ಸಾಮೂಹಿಕ ವಿಶ್ವಕರ್ಮ ಪೂಜಾ ಮಹೋತ್ಸವ ಮಂಗಳವಾರ ಜರುಗಿದೆ. ಇನ್ನು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮಾಜಿ ಸಚಿವ ಬಿ.ರಮಾನಾಥ ರೈ ಭೇಟಿ ನೀಡಿ ಕಾರ್ಯಕ್ರಮಕ್ಕೆ ಇನ್ನಷ್ಟು ಪುಷ್ಠಿ ನೀಡಿದ್ದಾರೆ . ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ರೈ ವಿಶ್ವಕರ್ಮ ಸಮುದಾಯ ಭವನ ನಿರ್ಮಾಣ ಮಾಡಲು ಮುಂದಾಗಿರುವಂತದ್ದು ದೊಡ್ಡ ವಿಷಯ, ಅದರ ಕಷ್ಟ ನಿರ್ಮಾಣದ ನೇತೃತ್ವ ವಹಿಸಿದವರಿಗೆ ಮಾತ್ರ ಗೊತ್ತು ಅಂತ ತಿಳಿಸಿದ್ರು. ಜೊತೆಗೆ ವಿಶ್ವಕರ್ಮದೇವರ ಆಶೀರ್ವಾದ ನಿಮ್ಮ ಮೇಲಿದೆ ಅದಕ್ಕೆ ನಾಜೂಕಾದ ಕೆಲಸದ ಶಕ್ತಿ ನಿಗೆ ಸಿಕ್ಕಿದೆ ಮಾತ್ರವಲ್ಲ ಹಲವು ಕಲೆಯಲ್ಲಿ ವಿಶ್ವಕರ್ಮ ಸಮುದಾಯದವರಿಗೆ ವಿಶೇಷವಾದ ಕೌಶಲ್ಯ ಹಾಗೂ ನೈಪುಣ್ಯತೆ ಇದೆ . ಗುರುಗಳನ್ನು ಮುಂದಿಟ್ಟುಕೊಂಡು ಸಂಸ್ಕೃತಿಯ ಜೊತೆ ಸೇರಿಕೊಂಡು ವಿಶ್ವಕರ್ಮ ಸಮುದಾಯದವರು ಮುನ್ನಡೆಯೋದು ಸಂತೋಷದ ಸಂಗತಿ ಎಂದಿದ್ದಾರೆ . ಇನ್ನು ಈ ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಲಯನ್ ಸುಧಾಕರ ಆಚಾರ್ಯ ಮಾರ್ನಬೈಲು , ಮುಖ್ಯ ಅತಿಥಿಯಾಗಿ ಮಾಜಿ ಸಚಿವರಾದ ಶ್ರೀ ಬಿ ರಮಾನಾಥ ರೈ, ಶಾಸಕ ಶ್ರೀ ರಾಜೇಶ್ ನಾಯ್ಕ್ ಉಳ್ಳಿಪಾಡಿ , ಶ್ರೀ ಯೋಗೀಶ್ ಆಚಾರ್ಯ , ಶ್ರೀ ಚಂದ್ರಪ್ರಕಾಶ್ ಶೆಟ್ಟಿ ತುಂಬೆ , ಶ್ರೀ ಹರೀಶ್ ಶೆಟ್ಟಿ ಪಡು , ಶ್ರೀ ಸತೀಶ್ ಆಚಾರ್ಯ ಜಲಕದಕಟ್ಟೆ , ಶ್ರೀ ಮನೋಜ್ ಆಚಾರ್ಯ ನಾಣ್ಯ , ಶ್ರೀ ಲೋಕೇಶ್ ಆಚಾರ್ಯ ಪೂಂಜಾಲಕಟ್ಟೆ , ಶ್ರೀಮತಿ ಪುಷ್ಪಡಿ ಆಚಾರ್ಯ , ಶ್ರೀ ನಾರಾಯಣ ಆಚಾರ್ಯ ಕಳ್ಳಿಗೆ , ಡಾ/ ಎಸ್ .ಎಂ ಗೋಪಾಲಕೃಷ್ಣ ಆಚಾರ್ಯ , ಶ್ರೀ ಶಿವಪ್ರಸನ್ನ ಆಚಾರ್ಯ , ಶ್ರೀ ಕೃಷ್ಣ ಪತ್ತಾರ್ .ಶ್ರೀ ವಿವೇಕ್ ಆಚಾರ್ಯ , ಶ್ರೀ ಬಿ ಕೆ ಮೋನಪ್ಪ ಆಚಾರ್ಯ, ಉಪಸ್ಥಿತರಿದ್ದರು ಇನ್ನು ಇವರ ಸಮ್ಮುಖದಲ್ಲಿ ಸೃಜನ್ ಆಚಾರ್ಯ ರಾಜ್ಯ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಪಟುವಿಗೆ ಸನ್ಮಾನ ಮಾಡಲಾಯಿತು

Be the first to comment

Leave a Reply

Your email address will not be published.


*