ಕಸಸಂಗ್ರಹ ಶುಲ್ಕವಸೂಲಿ ಹಾಗೂ ನೀರಿನದರ ಏರಿಕೆ ಕೈ ಬಿಡುವಂತೆ ಧರಣಿ; ಸಾಮಾನ್ಯರಂತೆ ಧರಣಿಯಲ್ಲಿ ಭಾಗಿಯಾದ ರೈ

ಬಂಟ್ವಾಳ ಪುರುಸಭಾ ಕಛೇರಿ ಮುಂಭಾಗದಲ್ಲಿ ಮಂಗಳವಾರ ಆಡಳಿತಾಧಿಕಾರಿಗಳ ಕ್ರಮ ವಿರೋಧಿಸಿ ಪ್ರತಿಭಟನೆ ನಡೆದಿದೆ.ಸಮಾನಮನಸ್ಕ ಸಂಘಟನೆಗಳ ಸಮನ್ವಯ ಸಮಿತಿ ಬಂಟ್ವಾಳ ತಾಲೂಕು ಇದರ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಮನೆಮನೆ ಕಸ ಸಂಗ್ರಹ ಶುಲ್ಕ ವಸೂಲಿ ಹಾಗೂ ನೀರಿನ ದರ ಏರಿಕೆ ಕೈ ಬಿಡುವಂತೆ ಒತ್ತಾಯಿಸಿ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ ನಡೆಸಲಾಯಿತು .. ಈ ಪ್ರತಿಭಟನೆಯಲ್ಲಿ ಸಾಮಾನ್ಯ ಗ್ರಾಹಕರಂತೆ ಮಾಜಿ ಸಚಿವ ಬಿ. ರಮಾನಾಥ ರೈ ಭಾಗಿಯಾಗಿದ್ದಾರೆ .. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ರೈ,ಪುರಸಭಾ ಚುನಾವಣೆ ಮುಗಿದಿದ್ದು, ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ನೇಮಕ ಆಯ್ಕೆಯಾಗಿಲ್ಲ. ನೀರಿನ ಹಾಗೂ ಕಸವಿಲೇವಾರಿ ಸೇರಿದಂತೆ ಕೆಲವೊಂದು ಸೌಕರ್ಯಗಳಿಗೆ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದು, ಅದನ್ನು ರದ್ದು ಪಡಿಸುವ ಪ್ರತಿಭಟನೆಗೆ ನನ್ನ ಸಂಪೂರ್ಣ ಬೆಂಬಲವಿದೆ. ಇನ್ನು ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಆಯ್ಕೆಯಾಗದ ನಿಟ್ಟಿನಲ್ಲಿ ಆಡಳಿತಾಧಿಕಾರಿಗಳ ಕ್ರಮ ಸೂಕ್ತವಾಲ್ಲ ಆದಷ್ಟುಬೇಗ ಪುರಸಭಾ ಆದ್ಯಕ್ಷರು ಆಯ್ಕೆಯಾಗಿ ಪ್ರಮುಖ ತೊಂದರೆಗಳ ಬಗ್ಗೆ ಚರ್ಚಿಸಿ ಕ್ರಮಕೈಗೊಳ್ಳಲಿ.ಅಲ್ಲಿ ತನಕ ಈ ಹೆಚ್ಚುವರಿ ಹಣ ಪೀಕಲಾತಿ ಬೇಡ ಅಂತ ಹೇಳಿದ್ದಾರೆ

Be the first to comment

Leave a Reply

Your email address will not be published.


*