ಅಜ್ಮಾನ್ ನೆಲದಲ್ಲಿ ೨ ನೇ ಅಂತರಾಷ್ಟ್ರೀಯ ವಾರ್ಷಿಕ ಸಮ್ಮೇಳನ ;ಪ್ರಶಸ್ತಿ ಸ್ವೀಕರಿಸಿದ ಡಾ. ಯು.ಟಿ ಇಫ್ತಿಕರ್ ಅಲಿ

ಯುಎಇಯ ಅಜ್ಮಾನ್‌ನಲ್ಲಿ ಸೆ.೧೪ ರಂದು ೨ ನೇ ಅಂತರಾಷ್ಟ್ರೀಯ ವಾರ್ಷಿಕ ಸಮ್ಮೇಳನ ಜರುಗಿದೆ.ಇನ್ನು ಕಾರ್ಯಕ್ರಮವನ್ನು ತುಂಬೆ ಗ್ರೂಪ್‌ನ ಸ್ಥಾಪಾಧ್ಯಕ್ಷ ಡಾ. ತುಂಬೆ ಮೊಹಿದ್ದೀನ್ ಆಯೋಜಿಸಿದ್ದಾರೆ.ಇನ್ನು ೨ನೇ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಡಾ. ಯು.ಟಿ ಇಫ್ತಿಕರ್ ಅಲಿ ಭಾಗಿಯಾಗಿದ್ದು ; ಭಾರತದ ಕರ್ನಾಟಕ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಭೌತಚಿಕಿತ್ಸೆಯ ಪ್ರದ್ಯಾಪಕ ಮತ್ತು ಸಿಂಡಿಕೇಟ್ ಸದಸ್ಯ ಪ್ರಮುಖ ಭೌತಚಿಕಿತ್ಸೆಯ ಮತ್ತು ಪುನರ್ವಸತಿ ತಜ್ಞರ ಕ್ಷೇತ್ರದಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ .. ಇನ್ನು ಕಾರ್ಯಕ್ರಮದಲ್ಲಿ ಸಮಾರಂಭದ ಮುಖ್ಯ ಅತಿಥಿಯಾಗಿ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ಅಜ್ಮಾನ್‌ರವರ ಶೇಕ್ ಡಾ. ಮಜೀದ್ ಬಿನ್ ಸಯೀದ್ ಅಲ್ ನುವಾಮಿ ಭಾಗವಹಿಸಿದ್ದಾರೆ. ಇನ್ನು ೧೪ ರಂದು ನಡೆದ ೨ನೇ ಅಂತರಾಷ್ಟ್ರೀಯ ವಾರ್ಷಿಕ ಸಮ್ಮೇಳನದಲ್ಲಿ ಯು.ಎ.ಇಯ ಅಜ್ಮಾನ್‌ನಲ್ಲಿ ನಡೆದ ಪುನರ್ವಸತಿ ಅಭ್ಯಾಸ ಮತ್ತು ಔಷಧದಲ್ಲಿ ನಾವಿನ್ಯತೆ ಕುರಿತ ವಿಷಯದ ಬಗ್ಗೆ ಚರ್ಚಿಸಲಾಯಿತು

Be the first to comment

Leave a Reply

Your email address will not be published.


*