ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ವಶಕ್ಕೆ

ಸುಮಾರು ಒಂದೂವರೇ ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಕವಿತ್ ಪೂಜಾರಿ(೨೯), ತಂದೆ: ಜಯ ಪೂಜಾರಿ, ವಾಸಕೃಷ್ಣ ನಗರ, ರಕ್ತೇಶ್ವರಿ ದೇವಸ್ಥಾನದ ಹಿಂಬಾಗ, ಒಳಪೇಟೆ, ತೊಕ್ಕೊಟ್ಟು, ಮಂಗಳೂರು ಎಂಬಾತನನ್ನು ದಸ್ತಗಿರಿ ಮಾಡಲಾಗಿರುತ್ತದೆ ಈತನ ಮೇಲೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಹಲ್ಲೆ, ಕೊಲೆಯತ್ನ ಮತ್ತು ಡರೋಡೆ ಪ್ರರಕಣ ಸೇರಿದಂತೆ ಸುಮಾರು ೬ ಪ್ರಕರಣಗಳು ದಾಖಲಾಗಿರುತ್ತದೆ. ಉಳ್ಳಾಲ ಪೊಲೀಸ್ ಠಾಣೆಯ ಕೊಲೆ ಯತ್ನ ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದು, ಆರೋಪಿಯ ಪತ್ತೆಯ ಬಗ್ಗೆ ಮಾನ್ಯ ನ್ಯಾಯಾಲಯವು ಈತನ ಮೇಲೆ ವಾರಂಟು ಹೊರಡಿಸಿಲಾಗಿತ್ತು . ಆರೋಪಿಯನ್ನು ಈ ದಿನ ದಸ್ತಗಿರಿ ಮಾಡಿ .ಮುಂದಿನ ಕ್ರಮದ ಬಗ್ಗೆ ಈತನನ್ನು ಉಳ್ಳಾಲ ಪೊಲೀಸ್ ಠಾಣೆಗೆ ಹಸ್ತಾಂತರಿಲಾಗಿದೆ. ಮಂಗಳೂರು ನಗರದ ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಡಾ:ಪಿ.ಎ.ಹರ್ಷಾ, ಐ.ಪಿ.ಎಸ್. ರವರ ನಿರ್ದೇಶನದಂತೆ, ಮಾನ್ಯರಾದ ಶ್ರೀ ಅರುಣಾಂಕ್ಷು ಗಿರಿ, ಐಪಿಎಸ್ ಡಿ.ಸಿ.ಪಿ (ಕಾನೂನು ಮತ್ತು ಸುವ್ಯವಸ್ಥೆ) ಮತ್ತು ಶ್ರೀ.ಲಕ್ಷ್ಮೀ ಗಣೇಶ್, ಡಿ.ಸಿ.ಪಿ (ಅಪರಾಧ ಮತ್ತು ಸಂಚಾರ ವಿಭಾಗ) ರವರ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಟಿ.ಕೋದಂಡರಾಮ್ ರವರ ಆದೇಶದಂತೆ ದಕ್ಷಿಣ ರೌಡಿ ನಿಗ್ರಹ ದಳದ ಸಿಬ್ಬಂದಿಯವರು ಪತ್ತೆ ಕಾರ್ಯದಲ್ಲಿ ಭಾಗವಹಿಸಿರುತ್ತಾರೆ.

 

Be the first to comment

Leave a Reply

Your email address will not be published.


*