ಡೆಂಗ್ಯೂ- ಪ್ಲೇಗ್‌ಗೆ ಬಲಿಯಾದ ೨೩ರ ಯುವಕ

ಈ ಬಾರಿ ಡೆಂಗ್ಯೂ ಅನ್ನೋ ಮಹಾಮಾರಕ ರೋಗ ದ.ಕ ಜಿಲ್ಲೆಯಲ್ಲಿ ಆವರಿಸಿದ್ದುಂ, ಹಲವರ ಸಾವಿಗೆ ಕಾರಣವಾಗಿತ್ತು.. ಜಿಲ್ಲಾಡಳಿತ ಎಷ್ಟೇ ಮುಂಜಾಗೃತ ಕ್ರಮವನ್ನು ನೀಡಿದ್ರು ಅದೂ ಜನರಮನಮುಟ್ಟಲು ಕಷ್ಟವಾಗಿತ್ತು . ಇದೀಗ ಡೆಂಗ್ಯು ,ಪ್ಲೇಗ್ ಮಹಾಮಾರಿಗೆ ಯುವಕನೊಬ್ಬ ಬಲಿಯಾಗಿದ್ದಾನೆ .ತೊಕ್ಕೊಟ್ಟು,ಭಟ್ನಗರ ನಿವಾಸಿ ಹರ್ಷಿತ್ ಗಟ್ಟಿ(೨೩) ಡೆಂಗ್ಯೂ ರೋಗಕ್ಕೆ ತುತ್ತಾಗಿ ಸಾವಿಗೀಡಾಗಿದ್ದಾನೆ. ಡೆಂಗ್ಯು ,ಪ್ಲೇಗ್ ನಿಂದ ಬಳಲುತ್ತಿದ್ದ ಹರ್ಷಿತ್, ಕಳೆದ ಹಲವು ದಿನಗಳಿಂದ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು , ಚಿಕಿತ್ಸೆ ಫಲಕಾರಿಯಾಗದೆ ಹರ್ಷಿತ್ ಭಾನುವಾರ ಸಾವನ್ನಪ್ಪಿದ್ದಾನೆ . ಈತ ಹರೀಶ್ ಗಟ್ಟಿ,ಮಮತಾ ಗಟ್ಟಿ ದಂಪತಿ ಹಿರಿಯ ಪುತ್ರನಾಗಿದ್ದು, ವೆಲ್ಡರ್ ವೃತ್ತಿ ನಡೆಸುತ್ತಿದ್ದ . ಇನ್ನು ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ದಿನಗಳ ಅಂತರದಲ್ಲಿ ಎರಡನೇ ಪ್ರಕರಣವಾಗಿದೆ.

Be the first to comment

Leave a Reply

Your email address will not be published.


*