ರಾಮನಗರದಲ್ಲಿ ಪಟಾಕಿ ಸೃಷ್ಟಿಸಿದ ಆತಂಕ !

ರಾಮನಗರದಲ್ಲಿಇಂದು ಬೆಳ್ಳಂಬೆಳಗ್ಗೆ ಬಾಂಬ್ ಸದ್ದು ಕೇಳಿಸಿದೆ. ಇದರಿಂದ ಜನರಲ್ಲಿ ಸ್ವಲ್ಪ ಮಟ್ಟಿನ ಆತಂಕ ಸೃಷ್ಟಿಯಾಗಿತ್ತು. ರಾಮನಗರದ ರಾಮ್ ಗಡ್ ಹೋಟೆಲ್ ಬಳಿ ಬಾಂಬ್ ಇಡಲಾಗಿದೆ ಎಂಬ ಮಾತು ಗುಲ್ಲಾಗಿತ್ತು .. ಆ ಮಾತು ಇಡೀ ಹರಿದಾಡಿದ್ದು ಜನರಲ್ಲಿ ಭಯ ಹುಟ್ಟಿಸಿತ್ತು. ಆದ್ರೆ ಅದು ಪಟಾಕಿ ಅಂತ ತಿಳಿದು ಆ ಮೇಲೆ ನಿರಾಳರಾಗಿದ್ದಾರೆ . ನಾಡಿನೆಲ್ಲೆಡೆ ಗಣಪತಿ ಉತ್ಸವವನ್ನು ಬಹಳ ವಿಜೃಂಬಣೆಯಿಂದ ಆಚರಿಸುತ್ತಿದ್ದು ಇತ್ತ ರಾಮನಗರದಲ್ಲೂ ಗಣೇಶೋತ್ಸವದ ಸಂಭ್ರಮ ಜೋರಾಗಿತ್ತು. ಶೊಭಾಯಾತ್ರೆಯ ದಿನದಂದು ಪಟಾಕಿ ಸಿಡಿಸಿ ಜನರು ಸಂಬ್ರಮಿಸಿದ್ದು ಮುಂಜಾನೆ ಬಾಕಿ ಉಳಿದ ಪಟಾಕಿ ಬಿದ್ದಿದ್ದು ಜನರು ಅದನ್ನು ನೋಡಿ ಬಾಂಬ್ ಎಂದು ಹೆದರಿದ್ದಾರೆ . ಇನ್ನು ಸ್ಥಳಕ್ಕೆ ತಕ್ಷಣ ಐಜೂರು ಪೊಲೀಸರ ಭೇಟಿ ನೀಡಿದ್ದು, ಶ್ವಾನದಳದ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಆಗ ಅವು ಆಟಂ ಬಾಂಬ್ ಪಟಾಕಿಗಳು ಎಂದು ತಿಳಿದುಬಂದಿದೆ.ಇದರಿಂದ ಜನರು ನಿರಾಳರಾಗಿದ್ದಾರೆ. ಇನ್ನು ರಾಮನಗರದಲ್ಲೂ ಹೈ ಅಲರ್ಟ್ ಘೋಷಿಸಿದ್ದು, ಪ್ರವಾಸಿ ತಾಣ, ಬಸ್ ನಿಲ್ದಾಣಗಳಲ್ಲಿ ತಪಾಸಣೆ ನಡೆಸಿದ್ದಾರೆ ಆದ್ರೆ ಯಾವುದೇ ಬಾಂಬ್ ಪತ್ತೆಯಾಗಿಲ್ಲ, ಅದು ಪಟಾಕಿ ಎಂದು ಎಸ್ಪಿ ಅನೂಪ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.

Be the first to comment

Leave a Reply

Your email address will not be published.


*