ಎಸ್.ಪಿ ಕಛೇರಿ ವರ್ಗಾವಣೆಯಾಗುವುದಾದರೆ ಬಂಟ್ವಾಳದಲ್ಲಿಯೇ ಕಛೇರಿ ನಿರ್ಮಾಣವಾಗಬೇಕು – ಮಾಜಿ ಸಚಿವ ರೈ

ಇಂದು ಮಾಜಿ ಸಚಿವ ಬಿ. ರಮಾನಾಥ ರೈ ನೇತೃತ್ವದಲ್ಲಿ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ಜರುಗಿದೆ. ಇನ್ನು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ರೈ ಪುತ್ತೂರು ಶಾಸಕರಿಗೆ ತಿರುಗೇಟು ನೀಡಿದ್ದಾರೆ ಪುತ್ತೂರಿಗೆ ಎಸ್.ಪಿ ಕಛೇರಿಯನ್ನು ವರ್ಗಾವಣೆ ಮಾಡಬೇಕೆಂದು ಪುತ್ತೂರು ಶಾಸಕ ತಿಳಿಸಿದ್ದು, ಅದಕ್ಕೆ ಪ್ರತ್ಯುತ್ತರವಾಗಿ ಮಾಜಿ ಸಚಿವ ರೈ , ಒಂದು ವೇಳೆ ಎಸ್.ಪಿ ಕಛೇರಿ ವರ್ಗಾವಣೆ ಆಗೋದಾದ್ರೆ ಅದು ಬಂಟ್ವಾಳ ಕ್ಷೇತ್ರದಲ್ಲೇ ಆಗಬೇಕು . ಅದಕ್ಕೆ ಕಾರಣನೂ ಇದೆ. ಬೆಳ್ತಂಗಡಿ , ಪುತ್ತೂರು , ಬಿ.ಸಿ ರೋಡ್‌ಗೆ ಹೋಗಬೇಕಾದ್ರೆ ಇಲ್ಲಿಂದಲ್ಲೇ ಹೋಗಬೇಕು . ಮಾತ್ರವಲ್ಲ ಪುತ್ತೂರಿಗೆ ಅಧಿಕಾರಿಗಳಿರಲಿ, ಜನರಿರಲಿ ಕಾರಣ ನಿಮಿತ್ತ ಹೋಗುತ್ತಾರೆ . ಆದ್ರೆ ಬಂಟ್ವಾಳಕ್ಕೆ ಜನರು ದಿನದಲ್ಲಿ ಎರಡು ಮೂರು ಸಲ ಬರುತ್ತಾರೆ . ಜೊತೆಗೆ ಬಂಟ್ವಾಳದ ಜನತೆನು ಮಂಗಳೂರಿಗೆ ದಿನದಲ್ಲಿ ೨ ರಿಂದ ಮೂರು ಬಾರಿ ಹೋಗುತ್ತಾರೆ ಅಂದ್ರು. ಇನ್ನು ಎಸ್.ಪಿ ಕಛೇರಿ ಬದಲಾಗೋದರಿಂದ ಏನು ಬದಲಾವಣೆ ಆಗೋದಿಲ್ಲ ಯಾಕಂದ್ರೆ ಉಳಿದ ಜಿಲ್ಲಾಮಟ್ಟದ ಕಛೇರಿಗಳು ಮಂಗಳೂರಿನಲ್ಲಿ ಇರೋದು ಎಂತ ತಿಳಿಸಿದ್ರು ಈ ರಾಜ್ಯದಲ್ಲಿ ಎಲ್ಲಾ ಕಡೆ ಜಿಲ್ಲಾ ವಿಭಾಗಾಧಿಕಾರಿ ಕಛೇರಿ ಆಗೋದಿದ್ರೆ , ಅದು ಬಂಟ್ವಾಳದಲ್ಲೂ ಆಗುತ್ತಿತ್ತು . ಅದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ನಡೆಸಿದ್ದೆ. ಆದ್ರೆ ಅದಕ್ಕೆ ಒಪ್ಪಿಗೆ ಇಲ್ಲ ಅಂತ ಹೇಳಿದ್ದಾರೆ . ಇದರ ಜೊತೆಗೆ ನೂತನ ಮೋಟಾರ್ ಕಾಯ್ದೆ ವಿಚಾರಕ್ಕೆ ಸಂಬಂಧಪಟ್ಟಂತೆ , ಸಮಾಜದ ಕನಿಷ್ಠ ವರ್ಗದ ಜನರಿಗೆ ತುಂಬಾ ಕಷ್ಟವಾಗುತಿದೆ. ದೊಡ್ಡ ಮೊತ್ತದ ಮೌಲ್ಯವನ್ನು ಕಟ್ಟಲು ಸಾಮಾನ್ಯ ಜನರಿಗೆ ಕಷ್ಟವಾಗುತ್ತದೆ. ದಂಡ ಹಾಕುವ ಪದ್ದತಿ ಇದೆ. ಸಮರ್ಪಕವಾದ ಅನುಷ್ಠಾನದಿಂದ ಮಾತ್ರ ಸಮಸ್ಯೆ ಪರಿಹಾರವಾಗುತ್ತೆ ಅಂತ ಇದೇ ಸಂದರ್ಭದಲ್ಲಿ ತಿಳಿಸಿದ್ರು. ಇನ್ನು ಹಿಂದಿ ಭಾಷೆ ಹೇರಿಕೆ ವಿಚಾರಕ್ಕೆ ಸಂಬಂಧ ಪಟ್ಟಂತೆ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ರೈ ಒಂದು ಭಾಷೆಯನ್ನು ತೆಗಳೋದರಿಂದ ಇನ್ನೊಂದು ಭಾಷೆ ಬೆಳೆಯಲು ಸಾಧ್ಯವಿಲ್ಲ. ಮಾತ್ರವಲ್ಲ ಹಿಂದೆ ಭಾಷೆ ಹೇರಿಕೆಯಿಂದ ಮುಂದೆ ದೊಡ್ಡ ಪರಿಣಾಮ ಎದುರಿಸಬೇಕಾಗುತ್ತದೆ ಅಂತ ಹೇಳಿದ್ದಾರೆ .

Be the first to comment

Leave a Reply

Your email address will not be published.


*