ಕೊಡಗಿನ ತಲಕಾವೇರಿ ತೀರ್ಥೊದ್ಭವಕ್ಕೆ ದಿನಾಂಕ ನಿಗದಿ ; ತಯಾರಿಯಲ್ಲಿ ನಿರತರಾದ ಜಿಲ್ಲಾಡಳಿತ

ವರ್ಷಕ್ಕೊಮ್ಮೆ ಸೂರ್ಯನು ತುಲಾ ರಾಶಿಗೆ ಪ್ರವೇಶಿಸುವ ಸಂಕ್ರಾಂತಿ ಮುಹೂರ್ತದಲ್ಲಿ ಕೊಡಗಿನ ತಲಕಾವೇರಿಯಲ್ಲಿ ಕಾವೇರಿ ತೀರ್ಥರೂಪಿಣಿಯಾಗಿ ಉದ್ಭವಿಸುತ್ತಾಳೆ. ಈ ಬಾರಿ ಅಕ್ಟೋಬರ್ ೧೮ರ ಶುಕ್ರವಾರ ಮುಂಜಾನೆ ೧೨ ಗಂಟೆ ೫೯ ನಿಮಿಷಕ್ಕೆ ಸಲ್ಲುವ ಕರ್ಕಾಟಕ ಲಗ್ನದಲ್ಲಿ ತೀರ್ಥರೂಪಿಣಿಯಾಗಿ ಉದ್ಭವಿಸಿ ಜನರನ್ನು ಪುನೀತಳಾಗಿಸಿದ್ದಾಳೆ. ಇನ್ನು ಇದಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ದತೆಗಳನ್ನು ನಡೆಸಿದ್ದು ಈಬಾರಿ ನಡುರಾತ್ರಿಯಲ್ಲಿ ತೀರ್ಥೋದ್ಬವ ಆಗುವ ನಿಟ್ಟಿನಲ್ಲಿ ಸಕಲ ತಯಾರಿ ಭರದಿಂದ ಸಾಗುತ್ತಿದೆ. ಅಂದಹಾಗೆ .ಪ್ರತಿ ವರ್ಷವೂ ತಿಂಗಳಿರುವಾಗಲೇ ಕಾವೇರಿಯ ಕ್ಷೇತ್ರದಲ್ಲಿ ತಕ್ಕ ಮುಖ್ಯಸ್ಥರು, ಊರಿನ ಪ್ರಮುಖರು, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಪ್ರಮುಖರ ಸಮ್ಮುಖದಲ್ಲಿ ತೀರ್ಥೋದ್ಭವದ ಸಮಯ ನಿರ್ಣಯ ಮಾಡಲಾಗುತ್ತದೆ. ಈ ವೇಳೆ ತುಲಾ ಸಂಕ್ರಮಣ ಜಾತ್ರೆಯಲ್ಲಿ ನಡೆಯಲಿರುವ ಕಾರ್ಯಕ್ರಮಗಳು ಮತ್ತು ಅವುಗಳ ಸಮಯವನ್ನು ನಿಗದಿಪಡಿಸುತ್ತಾರೆ. ಅದರಂತೆ ಈ ಬಾರಿಯೂ ಎಲ್ಲ ಪೂರ್ವ ತಯಾರಿಗಳ ಬಗ್ಗೆ ಗಮನ ಹರಿಸಿದ್ದು ರಾಜ್ಯದ ಹಲವೆಡೆಯಿಂದ ಜನರು ಬರುವ ನಿರೀಕ್ಷೆಯಿದೆ.

 

Be the first to comment

Leave a Reply

Your email address will not be published.


*