ಗ್ರಾಮೀಣ ಅಂಚೆ ನೌಕರರ ಹುದ್ದೆ ತುಂಬಲು ಅರ್ಜಿ ವಿಸ್ತರಣೆ

ಅಂಚೆ ಇಲಾಖೆಯಲ್ಲಿ ನೌಕರರಿಗಾಗಿ ಹುಡುಕಾಟ ಶುರುವಾಗಿದೆ. ಭಾರತೀಯ ಅಂಚೆ ಇಲಾಖೆಯು ಗ್ರಾಮೀಣ ಅಂಚೆ ನೌಕರರ ಹುದ್ದೆಗಳನ್ನು ತುಂಬಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ . ಸೆಪ್ಟೆಂಬರ್ ೧೬ ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕವನ್ನು ವಿಸ್ತರಿಸಲಾಗಿದೆ. ಇನ್ನು ಸಂಬಂಧಪಟ್ಟ ದಾಖಲೆಗಳನ್ನು ಅಪ್‌ಲೋಡ್ ಮಾಡಲು ಕೊನೆಯ ದಿನ ಸೆಪ್ಟೆಂಬರ್ ೨೨ ಆಗಿದೆ. ಈ ಅವಕಾಶವನ್ನು ಎಲ್ಲಾ ಅರ್ಹ ಅಭ್ಯರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಪ್ರಕಟಣೆ ತಿಳಿಸಿದೆ.

 

Be the first to comment

Leave a Reply

Your email address will not be published.


*