ಗಣೇಶೋತ್ಸವ ಶೋಭಾಯಾತ್ರೆಯಲ್ಲಿ ಮಾರಕಾಸ್ತ್ರಗಳ ಸದ್ದು

ಹುಬ್ಬಳ್ಳಿಯಲ್ಲಿ ಗಣಪತಿ ವಿಸರ್ಜನೆಯ ಮೆರವಣಿಗೆಯ ವೇಳೆ ದುಷ್ಕರ್ಮಿಗಳಿಂದ ಚಾಕು ಚೂರಿ ಇರಿತವಾಗಿದೆ . ನಗರದ ಆರು ಕಡೆಗಳಲ್ಲಿ ಮಾರಕಾಸ್ತ್ರಗಳು ಬೆಳಗಾಗುವಷ್ಟರಲ್ಲಿ ಸದ್ದು ಮಾಡಿದೆ . ಹೌದು ಗಣೇಶ ವಿಸರ್ಜನೆಯ ಮೆರವಣಿಗೆಯನ್ನೇ ಲಾಭ ಮಾಡಿಕೊಂಡ ದುಷ್ಕರ್ಮಿಗಳುನಗರದ ದುರ್ಗದ ಬೈಲ್ ನಲ್ಲಿ ೩ ಜನರಿಗೆ , ಹರ್ಷಾ ಕಾಂಪ್ಲೆಕ್ಸ್ ನಲ್ಲಿ ಒಬ್ಬರಿಗೆ , ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಒಬ್ಬರಿಗೆ ,ಹಳೇ ಹುಬ್ಬಳ್ಳಿಯಲ್ಲಿ ಒಬ್ಬರಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾರೆ ಇನ್ನು ಇರಿತಕ್ಕೊಳಗಾದವರು , ಬಸವರಾಜ, ವೀರೇಶ, ಶಿವು ಮಹಾಂತೇಶ , ಬಸವನಗೌಡ ಹೊಸಮನಿ ಸಿರಿಯಸ್, ವಿನಾಯಕ ಭಜಂತ್ರಿ , ಮಂಜುನಾಥ ಗೋಕಾಕ , ನಾಗರಾಜ ಕುಂಬಾರ, ಪ್ರಕಾಶ ಕಠಾರೆಯರು ಎಂದು ತಿಳಿದು ಬಂದಿದೆ. ಇನ್ನು ಗಾಯಗೊಳಗಾದವರಲ್ಲಿ ಇಬ್ಬರು ಜೀವನ್ಮರಣದ ನಡುವೆ ಹೊರಾಡುತಿದ್ದರೆ ಉಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.ಒಟ್ಟಾರೆ ಒಂದೆಡೆ ಗಣಪತಿ ವಿಸರ್ಜನೆಗೆ ಪೊಲೀಸ್ ಭದ್ರತೆ ಮತ್ತೊಂದೆಡೆ ಮಾರಕಾಸ್ತ್ರಗಳ ಸದ್ದು, ನಗರದಲ್ಲಿ ಹೆಚ್ಚಾಗುತ್ತಿರುವ ಚಾಕು ಚೂರಿ ಸಂಸ್ಕೃತಿಗೆ ಬ್ರೇಕ್ ಬೀಳುತ್ತಿಲ್ಲ ಎಂದು ಹುಬ್ಬಳ್ಳಿಯ ಜನ ಹಾಗೂ ಪೊಲೀಸರು ಕಂಗಾಲಾಗಿದ್ದಾರೆ.

Be the first to comment

Leave a Reply

Your email address will not be published.


*