ಪೈಲ್ವಾನ್ ಚಿತ್ರದ ಬಗ್ಗೆ ಸಂಗೀತ ನಿರ್ದೇಶಕನಿಂದ ನೆಗೆಟೀವ್ ಕಮೆಂಟ್

ಗಾಂಧೀನಗರದಲ್ಲಿ ಸಾಕಷ್ಟು ಸುದ್ದಿ ಮಾಡಿ ಹವಾ ಎಬ್ಬಿಸಿದ ಸಿನಿಮಾ ಪೈಲ್ವಾನ್ .. ೨ ವರ್ಷದಿಂದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ಪೈಲ್ವಾನ್ ಸೆ.೧೨ಕ್ಕೆ ತೆರೆಮೇಲೆ ಅಪ್ಪಳಿಸಿದೆ.. ಸಿನಿಮಾ ಬೆಳ್ಳಿತೆರೆಗೆ ಬಂದಿದ್ದೆ ತಡ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಇನ್ನು ಸೋಷಿಯಲ್ ಮೀಡಿಯಾದಲ್ಲಂತೂ ಸುದೀಪ್ ಅಭಿನಯಕ್ಕೆ ಭೇಷ್ ಅಂದಿದ್ದು ಸಿನಿಮಾಕ್ಕೆ ಸಿನಿಪ್ರೀಯರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ .. ಇನ್ನು ಅಭಿಮಾನಿಗಳಿಂದ ಫುಲ್ ಮಾರ್ಕ್ಸ್ ಪಡೆದಿರೋ ಈ ಚಿತ್ರದ ಬಗ್ಗೆ ಚಿತ್ರತಂಡದ ವ್ಯಕ್ತಿಯೊಬ್ಬರು ಪೈಲ್ವಾನ್ ಬಗ್ಗೆ ದೂರಿದ್ದಾರೆ . ಹೌದು ಕನ್ನಡ ಸಂಗೀತ ನಿರ್ದೇಶಕ ಕಿರಣ್ ತೋಟಂಬೈಲ್ ಕೂಡ ’ಪೈಲ್ವಾನ್’ ಸಿನಿಮಾ ನೋಡಿ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ”ಈ ಸಿನಿಮಾ ಸುದೀಪ್‌ರಿಗೆ ಅವಮಾನ ಮಾಡುವ ಸಿನಿಮಾ” ಎಂದು ಹೇಳಿದ್ದಾರೆ.ಇನ್ನು ಸಂಗೀತ ನಿರ್ದೇಶಕರು ಹಾಕಿರೋ ಈ ಸ್ಟೇಟಸ್ ಅಭಿಮಾನಿಗಳನ್ನು ರೊಚ್ಚಿಗೇಳಿಸಿದ್ದು ; ಅಭಿಮಾನಿಯೊಬ್ಬ ಕಿರಣ್ ಗೆ ಕ್ಲಾಸ್ ತೆಗೆದುಕೊಂಡಿದ್ದಾನೆ. ಅಂದಹಾಗೆ ಕಿರಣ್ ತೋಟಂಬೈಲ್ ತಮ್ಮ ಫೇಸ್‌ಬುಕ್ ಸ್ಟೇಟಸ್‌ನಲ್ಲಿ ”ಪೈಲ್ವಾನ್ ನೋಡಿ ಶಾಕ್ ಆಗಿದ್ದೀವಿ. ಕೃಷ್ಣ ಅವರೇ ಯಾಕೆ ಇಂತಹ ಸಿನಿಮಾ ಮಾಡಿ ಸುದೀಪ್ ನ ಅವಮಾನ ಮಾಡಿತ್ತೀರಿ” ಎಂದು ನಿರ್ದೇಶಕ ಕೃಷ್ಣ ವಿರುದ್ಧ ಬರೆದುಕೊಂಡಿದ್ದು ಇದೀಗ ಹಲವು ಇದರ ಬಗ್ಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ.

Be the first to comment

Leave a Reply

Your email address will not be published.


*