ಶಿವಸೇನೆಗೆ ಸೇರ್ಪಡೆಯಾದ ಎನ್‌ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ಶರ್ಮಾ

ಮುಂಬಯಿ ಪೊಲೀಸ್ ಅಧಿಕಾರಿ ಪ್ರದೀಪ್ ಶರ್ಮಾ ಶಿವಸೇನೆಗೆ ಸೇರ್ಪಡೆಯಾಗೋ ಮೂಲಕ ಎಲ್ಲರಿಗೆ ಅಚ್ಚರಿ ಮೂಡಿಸಿದ್ದಾರೆ . ಮುಂಬಯಿ ಪೊಲೀಸ್ ಪಡೆಯ ಖ್ಯಾತ ಎನ್ ಕೌಂಟರ್ ಸ್ಪೆಷಲಿಸ್ಟ್‌ಗಳಲ್ಲಿ ಒಬ್ಬರು ಪ್ರದೀಪ್ ಶರ್ಮಾ.. ಇದೀಗ ಶೀವಸೇನೆಗೆ ಸೇರ್ಪಡೆ ಆಗಿದ್ದಾರೆ. ಹೌದು ಇತ್ತೀಚೆಗೆ ಪ್ರದೀಪ್ ಶರ್ಮಾ ಪೊಲೀಸ್ ಇಲಾಖೆಗೆ ರಾಜೀನಾಮೆ ನೀಡಿದ್ದು ಬಳಿಕ ರಾಜಿನಾಮೆಯನ್ನು ಅಂಗೀಕಾರ ಮಾಡಲಾಗಿತ್ತು.ನಂತರ ಅವರ ಅಭಿಮಾನಿ ಹಾಗೂ ಸಾರ್ವಜನಿಕರಿಗೆ ಇವರು ಮುಂದೇನು ಮಾಡ್ತಾರೆ ಅನ್ನೋ ಕುತೂಹಲ ಇತ್ತು. ಇದೀಗ ಶಿವಸೇನೆಗೆ ಸೇರೋ ಮೂಲಕ ಕುತೂಹಲಕ್ಕೆ ತೆರೆಬಿದ್ದಿದೆ. ಇನ್ನು ಪ್ರದೀಪ್ ಶರ್ಮಾನೂರಕ್ಕೂ ಹೆಚ್ಚು ಮಂದಿ ಕ್ರಿಮಿನಲ್ ಗಳನ್ನು ಪೊಲೀಸ್ ಎನ್ ಕೌಂಟರಿನಲ್ಲಿ ಸಾಯಿಸಲಾಗಿತ್ತು. ಮಾತ್ರವಲ್ಲ ಶರ್ಮಾ ವಿರುದ್ಧ ಒಂದು ಪ್ರಕರಣ ವಿಚಾರಣೆಗೆ ಬಾಕಿ ಇರುವುದರಿಂದ ಅವರಿಗೆ ನಿವೃತ್ತಿ ಸೌಲಭ್ಯ ನೀಡಲಾಗಿಲ್ಲ.

Be the first to comment

Leave a Reply

Your email address will not be published.


*