ಮಡಂತ್ಯಾರು ಜೆಸಿಐ ವಲಯ ಉತ್ತಮ ನಾಯಕರನ್ನು ಸಮಾಜಕ್ಕೆ ಕೊಡುವಲ್ಲಿ ಯಶಸ್ವಿಯಾಗಿದೆ -ಮಾಜಿ ಸಚಿವ ರೈ

ಜೆಸಿಐ ಮಡಂತ್ಯಾರು ಪ್ರಾಂತ್ಯ ಇ ವಲಯ ೧೫ರ ವರ್ಣರಂಜಿತ ಜೇಸಿ ಸಪ್ತಾಹ ೨೦‍೧೯ರ ಸಂಭ್ರಮದ ಬೆಳಕು ಕಾರ್ಯಕ್ರಮ ಇಂದು ಜರುಗಿದೆ .ಇನ್ನು ಕಾರ್ಯಕ್ರಮವನ್ನು ಮಾಜಿ ಸಚಿವ ಶ್ರೀ ಬಿ ರಮಾನಾಥ್ ರೈ ಅವರು ಉದ್ಘಾಟಿಸಿ ಮಾತನಾಡಿದ್ದಾರೆ .ಬೆಳಕು ಉದಯಿಸುವ ರವಿ ಯಿಂದಲೇ ಮುಂಜಾವಿನ ಸುಂದರ ಬೆಳಕು ಪ್ರಜ್ವಲಿಸು ಸುಜ್ಞಾನದಿಂದಲೇ ಸುಗಮ ಹಾದಿ ಬೆಳಕು ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಮಾಜಿ ಸಚಿವ ರೈ ಹೊಗಳಿಕೆಯಿಂದ ಸಹಾಯ ಮಾಡುವುದು ಸುಳ್ಳಿನ ವಿಚಾರ ಸೈನಿಕರನ್ನು ನಿಷ್ಪಕ್ಷಪಾತವಾಗಿಗೌರವಿಸಬೇಕು ಅಂತ ತಿಳಿಸಿದ್ದಾರೆ .ಜೊತೆಗೆ ಜೇಸಿಐ ಸಂಸ್ಥೆ ಸಾಕಷ್ಟು ನಾಯಕರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದೆ ವ್ಯಕ್ತಿತ್ವದ ವಿಕಸನ ಮಾಡಬೇಕಾದರೆ ಒಳ್ಳೆಯ ವೇದಿಕೆ ಅಗತ್ಯ ಅಂತಹ ವೇದಿಕೆಗಳಲ್ಲಿ ಒಂದು ಜೇಸಿಐ ವೇದಿಕೆ ಅಂತ ಹೇಳಿದ್ದಾರೆ .ಮಾತ್ರವಲ್ಲ ಜೆಸಿಐ ಮಡಂತ್ಯಾರು ವಲಯ ಸಾಕಷ್ಟು ಉತ್ತಮ ನಾಯಕರನ್ನು ಸಮಾಜಕ್ಕೆ ಕೊಡುವಲ್ಲಿ ಯಶಸ್ವಿಯಾಗಿದ್ದು ಹೆಗ್ಗಳಿಕೆಯ ಮಾತಿಗೆ ಪಾತ್ರವಾಗಿದೆ .ಇನ್ನು ಕರ್ನಾಟಕ ರಾಜ್ಯ ಅತ್ಯಂತ ಹೆಚ್ಚು ಆನೆಗಳು ಇರುವಂಥ ರಾಜ್ಯ ವನ್ಯ ಸಂಪತ್ತಿನಲ್ಲಿ ವನ್ಯ ಜೀವಿಗಳಲ್ಲಿ ಪರಿಸರ ಸಂರಕ್ಷಣೆಯಲ್ಲಿ ರಾಜ್ಯ ಎತ್ತಿದ ಕೈ ಇದಕ್ಕೆ ಜೇಸಿಐ ಸಹಕಾರ ಕೊಟ್ಟಿದೆ ಅಂತ ತಿಳಿಸಿದ್ದರು .ಇನ್ನು ಕಾರ್ಯಕ್ರಮದಲ್ಲಿ ಜೆಸಿಐಯ ಅಧ್ಯಕ್ಷರಾದ JFM ಅರುಣ್ ಮೋರಸ್ ,ಶ್ರೀ ಜಯರಾಮ ನೆಲ್ಲಿತ್ತಾಯ .JEP ರಾಕೇಶ್ ಕುಂಜೂರು ,ಶ್ರೀ ಶಿವಪ್ರಕಾಶ್ ,ಜನಾಬ್ ಹಾಜಿ ಅಬ್ದುಲ್ ಲತೀಫ್ ಸಾಹೇಬ್ ,ಶ್ರೀ ರಾಘವೇಂದ್ರ ಪಾಟೀಲ್ ,ಜೇಸಿ ಬಿ .ಜಯಂತ್ ಶೆಟ್ಟಿ ,ಶ್ರೀ ರಾಜಶೇಖರ್ ಶೆಟ್ಟಿ ಭಂಡಾರಿಗುಡ್ಡೆ ,ಶ್ರೀ ಧರ್ಣಪ್ಪ ಗೌಡ ,ಶ್ರೀ ಗಿರೀಶ್ ಪೈ ,ಶ್ರೀ ಯೋಗೀಶ್ ಕಡ್ತಿಲ ,ಶ್ರೀ ಸೀತಾರಾಮ ನೆತ್ತರ ಉಪಸ್ಥಿತರಿದ್ದರು .ಹಾಗೂ ಜೇಸಿ ಸಾಧನಾಶ್ರೀ :ಶ್ರೀ ಸಚಿನ್ ವಿ .ಕೆ ದೇಶ ಸೇವೆಯ ಕುರಿತು ಸನ್ಮಾನಿಸಲಾಯಿತು .

Be the first to comment

Leave a Reply

Your email address will not be published.


*