ದ. ಕ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಸ್ಥಾನಕ್ಕೆ ಹಿಂದೇಟು ಹಾಕಿದ ಮಾಜಿ ಸಚಿವ ರಮಾನಾಥ ರೈ

ದ.ಕ ಜಿಲ್ಲೆಗೆ ಇದೀಗ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಕೊರತೆ ಕಾಡುತ್ತಿದೆ. ಹಿರಿಯ ರಾಜಕಾರಣಿ , ಪ್ರಬಲ ನಾಯಕ ಮಾಜಿ ಸಚಿವ ರಮಾನಾಥ ರೈ ಹೆಸರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಕೇಳಿ ಬರುತ್ತಿದ್ದರೂ ; ಜಿಲ್ಲಾಧ್ಯಕ್ಷ ಸ್ಥಾನದ ಪಟ್ಟಕ್ಕೇರಲು ಮಾಜಿ ಸಚಿವ ರೈ ಹಿಂದೇಟು ಹಾಕುತ್ತಿದ್ದಾರೆ . ಯುವ ಕಾಂಗ್ರೆಸ್ ನಾಯಕರಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಲು ರೈ ಅಭಿಪ್ರಾಯ ವ್ಯಕ್ತ ಪಡಿಸಿದ್ದು ಮಿಥುನ್ ರೈಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡೋ ಹುಮ್ಮಸ್ಸು ಹೆಚ್ಚಾಗಿದ್ದು; ಲೋಕಸಭಾ ಚುನಾವಣೆ ಸಂದರ್ಭದಲ್ಲಿನ ಸೋಲು , ಡಿಕೆಶಿ ಬಂಧನ ಹಿನ್ನಲೆ ಮಿಥುನ್ ರೈ ಕೂಡ ಸ್ಥಾನವನ್ನಲಂಕರಿಸಲು ಮನಸ್ಸು ಮಾಡುತ್ತಿಲ್ಲ.ಒಂದು ಕಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನ್ನಕ್ಕೇರಲು ಅಭ್ಯರ್ಥಿಗಳ ದಂಡೇ ತುದಿಕಾಲಲ್ಲಿ ನಿಲ್ಲೋ ಕಾಲವೊಂದಿತ್ತು . ಆಗ ಆಕಾಂಕ್ಷಿಗಳು ನಿಯೋಗದಿಂದ ಬೆಂಗಳೂರು , ದೆಹಲಿಗೆ ತೆರಳಿ ಕೆಪಿಸಿಸಿ, ಎಐಸಿಸಿಯಲ್ಲಿ ಲಾಭಿ ನಡೆಸೋ ಕಾಲವೂ ಇತ್ತು ಆದ್ರೆ ಇದೀಗ ದ.ಕ ಜಿಲ್ಲಾ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಹುದ್ದೆ ಯಾರಿಗೂ ಬೇಡವಾಗಿದೆ.ಒಟ್ಟಾರೆ ಜಿಲ್ಲಾದ್ಯಕ್ಷರ ಸ್ಥಾನ ತುಂಬಲಾರದೆ ಕಾಂಗ್ರೆಸ್ ಪಕ್ಷ ಬಡವಾಗಿದೆ.

 

 

 

Be the first to comment

Leave a Reply

Your email address will not be published.


*