ಮಂಜೇಶ್ವರದಲ್ಲಿ ಯುವಮೋರ್ಚಾ ಕಾರ್ಯಕರ್ತರಿಂದ ಧರಣಿ

ರಾಜ್ಯದಲ್ಲಿ ರೋಡ್ ವ್ಯವಸ್ಥೆ ಸರಿಯಿಲ್ಲದೆ . ಜನರು ಪ್ರಯಾಣಿಸಲು ಪರದಾಡುತ್ತಿದ್ದಾರೆ . ಅಲ್ಲಲ್ಲಿ ಗುಂಡಿಗಳು ಬಿದ್ದು ಓಡಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತ ಮಂಗಳೂರಿನಿಂದ ಕಾಸರಗೋಡಿಗೆ ಹೋಗೋ ರಸ್ತೆಗಳಂತೂ ಹಳ್ಳ ಗುಂಡಿಗಳಿಂದ ತುಂಬಿ ಹೋಗಿದ್ದು ಜನರು ಹಿಡಿಶಾಪ ಹಾಕುತ್ತಿದ್ದಾರೆ .ಈ ಹಿನ್ನಲೆ ಇಂದು ಮಂಜೇಶ್ವರದಲ್ಲಿ ಯುವ ಮೋರ್ಚಾ ಕಾರ್ಯಕರ್ತರಿಂದ ರಾಷ್ಟ್ರೀಯ ಹೆದ್ದಾರಿ ೬೬ರ ದುರಸ್ಥಿ ಕಾಮಗಾರಿಗೆ ಶೀಘ್ರ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು . ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯಕರ್ತರು ಕಳೆದ ಬಾರಿ ನೆರೆಸಂತ್ರಸ್ಥರಿಗೆ ನೆರೆಗೆ ಸಿಕ್ಕಿದ ಪರಿಹಾರವನ್ನು ಎಲ್‌ಡಿಎಫ್ ನುಂಗಿ ನೀರು ಕುಡಿದು ಜನರಿಗೆ ಮಣ್ಣೆರೆಚುವ ಕೆಲಸ ಮಾಡಿದೆ ಎಂದಿದ್ದಾರೆ .ಇನ್ನು ಕೇರಳ ಸಾರಿಗೆಯ ೨೦ ಬಸ್ಸುಗಳು ಸಂಚಾರಕ್ಕೆ ಬರುತ್ತಿಲ್ಲ . ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಆದಷ್ಟು ಬೇಗ ಇದರ ಬಗ್ಗೆ ಕ್ರಮಕೈಗೊಳ್ಳಬೇಕು .ಇಲ್ಲದಿದ್ದರೆ ಪ್ರತಿಭಟನೆಗೆ ಜನರು ಮಾಡಬೇಕಾಗುತ್ತದೆ ಅಂತ ತಿಳಿಸಿದ್ರು.

 

Be the first to comment

Leave a Reply

Your email address will not be published.


*