ಬೆಂಗಳೂರು ಪೊಲೀಸರ ಬಾಂಬೆ ಕಟ್ ವೀಡಿಯೋ ವೈರಲ್; ಎಸ್‌ಐ ಅಮಾನತು

ಬೆಂಗಳೂರು ಪೊಲೀಸರ ಬಾಂಬೆ ಕಟ್ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿದ್ದ ಬೆನ್ನಲೇ ಇದೀಗ ಎಸ್‌ಐ ಅಮಾನತುಗೊಂಡಿದ್ದಾರೆ .ಇನ್ನು ವಿಡಿಯೋ ಪರಿಶೀಲಿಸಿದ ಬಳಿಕ ಆರೋಪಿಯ ಜೊತೆ ಪೊಲೀಸರು ಅನುಚಿತವಾಗಿ ವರ್ತಿಸಿರೋದು ತಪ್ಪು ಎಂದು ಎಸ್ ಐ ಶ್ರೀ ಕಂಠೇಗೌಡರವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಬೆಂಗಳೂರಿನ ವರ್ಲ್ಡ್ ಟ್ರೇಡ್ ಸೆಂಟರ್‌ನಲ್ಲಿ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಯಶ್ವಂತ್ ಅನ್ನೋ ಯುವಕ ತನ್ನ ಕಂಪನಿ ಬಳಿ ಪಾರ್ಕಿಂಗ್‌ನಲ್ಲಿ ಕೆಲಸ ಮಾಡೋ ಹುಡುಗಿಗೆ ದಿನನಿತ್ಯ ಲೈಂಗಿಕ ಕಿರುಕುಳ ಕೊಡ್ತಿದ್ದ ಅನ್ನೋ ಆರೋಪ ಕೇಳಿಬಂದಿದ್ದು ; ಈ ಹಿನ್ನಲೆ ಯಶ್ವಂತ್‌ನನ್ನು ಪೊಲೀಸರು ಬಂಧಿಸಿದ್ದು ಶ್ರೀಕಂಠೇಗೌಡ ಯಶ್ವಂತ್‌ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಬಾಂಬೆಕಟ್ ಹಾಕಿ ಥಳಿಸಿದ್ದಾರೆ .ಹೊಡಿಯೊ ಏಟಿಗೆ ಎಸ್ ಐ ಲಾಟಿ ಹಾಗೂ ಹಾಕಿಸ್ಟಿಕ್ ಹಿಡಿದು ಆರೋಪಿಗೆ ಬಾರಿಸಿದ್ದು ಸ್ಟಿಕ್ ಮುರಿದು ಹೋಗಿದೆ . ಈ ದೃಶ್ಯಾವಳಿ ವೈರಲಾಗಿದ್ದು . ಇದೀಗ ಅಮಾನತಿಗೆ ಕಾರಣವಾಗಿದೆ.

Be the first to comment

Leave a Reply

Your email address will not be published.


*