ಲಂಡನ್‌ನಲ್ಲಿ ಬಸವೇಶ್ವರರ ತತ್ವಗಳನ್ನು ಸಾರಿದ ಶ್ರೀ ಚಂದ್ರ ಶೇಖರ ಸ್ವಾಮೀಜಿ

ಕಾಯಕವೇ ಕೈಲಾಸ ಎಂಬ ಸರಳವಾದ ಮಂತ್ರವನ್ನು ಜನರಿಗೆ ತಿಳಿಸಿ ದೇಶವನ್ನು ಮೌಡ್ಯ ಹೊರತಂದಿರುವ ಮಹಾನ್ ಸಂತ ಬಸವೇಶ್ವರರು ಎಂದು ಲಂಡನ್ ನೆಲದಲ್ಲಿ ಬಸವೇಶ್ವರರ ತತ್ವಗಳನ್ನು ವೈಜ್ಞಾನಿಕ ಜ್ಯೋತಿಷಿ , ವಾಸ್ತು ತಜ್ಞ ಶ್ರೀ ಚಂದ್ರ ಶೇಖರ ಸ್ವಾಮೀಜಿ ಮಾತನಾಡಿದ್ದಾರೆ . ಅಂತರಾಷ್ಟ್ರೀಯ ವಾಸ್ತು ತಜ್ಞ , ಖ್ಯಾತ ಜ್ಯೋತಿಷಿ ಶ್ರಿ ಚಂದ್ರಶೇಖರ ಸ್ವಾಮೀಜಿಯವರನ್ನು ಇತ್ತೀಚೆಗೆ ಲಂಡನ್ ಕೈಬೀಸಿ ಕರೆದಿತ್ತು.ಲಂಡನ್ ದೇಶದ ಥೇಮ್ಸ್ ನದಿ ದಡದಲ್ಲಿರುವ ಲಾಂಬೆತ್‌ನಲ್ಲಿ ಪ್ರತಿಷ್ಠಾಪಿಸಿರುವ ವಿಶ್ವ ಗುರು ಶ್ರೀ ಬಸವೇಶ್ವರರ ದಶ್ನ ಪಡೆದು ವಿಶೇಷ ಪೂಜೆ ಸಲ್ಲಿಸಿ ಈ ಮಾತನ್ನಾಡಿದ್ದಾರೆ. ಇನ್ನು ಈ ಸಮಾರಂಭದಲ್ಲಿ ಲಾಂಬೆತ್ ಮಾಜಿ ಮೇಯರ್ ಶ್ರೀ ನೀರಜ್ ಪಾಟೀಲ್ ಶ್ರೀ ಚಂದ್ರಶೇಖರ ಸ್ವಾಮೀಜಿಯವರಿಗೆ ಬಸವ ಸಮಿತಿಯಿಂದ ಶಾಲು ಹೊದಿಸಿ ಫಲ ತಂಬೂಲ ನೀಡಿ ವಿಶೇಷವಾಗಿ ಸನ್ಮಾನಿಸಲಾಯಿತು . ಸಮಾರಂಭದಲ್ಲಿ ಶ್ರೀಮತಿ ರಜನಿ ಚಂದ್ರಶೇಖರ್ , ಕುಮಾರಿ ರೋಶನಿ .ಸಿ.ಭಟ್ , ರಾಹುಲ್ ಸಿ.ಭಟ್ ಹಾಗೂ ನಿಖಿಲ್ ಕುಮಾರ್ ಭಾಗಿಯಾಗಿದ್ದರು.

Be the first to comment

Leave a Reply

Your email address will not be published.


*