ಎಐಸಿಎಸ್ ಅಂತರ್ ಶಾಲಾ ಟೇಬಲ್ ಟೆನ್ನಿಸ್ ಪಂದ್ಯಾಟ ; ಎಂಆರ್‌ಪಿಎಲ್ ಶಾಲೆಗೆ ಎರಡು ಪ್ರಶಸ್ತಿ

ಮಂಗಳೂರಿನ ಸಿಬಿಎಸ್‌ಇ-ಐಸಿಎಸ್‌ಇ ಡೆಲ್ಲಿ ಪಬ್ಲಿಕ್ ಶಾಲೆಯಲ್ಲಿ ಎಐಸಿಎಸ್ ಅಂತರ್ ಶಾಲಾ ಟೇಬಲ್ ಟೆನ್ನಿಸ್ ಪಂದ್ಯಾಟ ಜುರುಗಿದೆ. ಸೋಮವಾರ ಟೂರ್ನಮೆಂಟ್ ಜರುಗಿದ್ದು , ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ರಾಷ್ಟ್ರೀಯ ಕ್ರೀಡಾಪಟು ಎಮ್.ಸಿ.ಒ.ಡಿ.ಎಸ್ ಮಣಿಪಾಲ್ ಮಿ. ಮಿಶಾಲ್ ದಿಲಾವರ್ ನೆರವೇರಿಸಿ ಕೊಟ್ಟಿದ್ದಾರೆ .ಇನ್ನು ಉದ್ಘಾಟನಾ ಸಮಾರಂಭದಲ್ಲಿ ಇನ್ನುಳಿದಂತೆ, ಡೆಲ್ಲಿ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಪಿ.ಎಸ್ .ಚಂದ್ರಶೇಖರ್, ಎಐಸಿಎಸ್‌ನ ರೂವಾರಿ ಹಾಗೂ ಮಂಗಳೂರಿನ ಮೌಂಟ್ ಕಾರ್ಮೆಲ್ ಸ್ಕೂಲ್ ದೈಹಿಕ ನಿರ್ದೇಶಕ ಪ್ರವೀಣ್ ಕುಮಾರ್ ಟಾರ್ಪೊಡೋಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಹಾಗೂ ಡೆಲ್ಲಿ ಪಬ್ಲಿಕ್ ಸ್ಕೂಲ್‌ನ ದೈಹಿಕ ನಿರ್ದೇಶಕ ಗೌತಮ್ ಶೆಟ್ಟಿ , ಟೇಬಲ್ ಟೆನ್ನಿಸ್ ಪಂದ್ಯಾವಳಿ ಮುಖ್ಯ ತೀರ್ಪುಗಾರ ಹಾಗೂ ಕೋಚ್ ಅಶ್ವಿನ್ ಪಡುಕೋಣೆ ಹಾಗೂ ಡೆಲ್ಲಿ ಪಬ್ಲಿಕ್ ಸ್ಕೂಲ್‌ನ ಶಿಕ್ಷಕಿ ಶ್ರೀಮತಿ ಸುನಿತಾ ರೋಡ್ರಿಗಸ್ ಹಾಗೂ ಶಿಕ್ಷಕರಾದ ಲೋಕೇಶ್ ದೇವಾಡಿಗ ಉಪಸ್ಥಿತರಿದ್ದರು .ಅಂದಹಾಗೆ ಪಂದ್ಯಾವಳಿಯಲ್ಲಿ ವಿವಿಧ ಶಾಲೆಗಳಿಂದ ೨೫ ತಂಡಗಳು ಭಾಗಿಯಾಗಿದ್ದು , ೧೫೦ ಕ್ಕೂ ಹೆಚ್ಚು ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.ಇನ್ನು ೧೪ ಹಾಗೂ ೧೭ ವರ್ಷದೊಳಗಿನ ಬಾಲಕ ಬಾಲಕಿಯ ಟೇಬಲ್ ಟೆನ್ನಿಸ್ ಪಂದ್ಯಾವಳಿ ಜರುಗಿದ್ದು , ೧೪ ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಮಂಗಳೂರಿನ ಸೈಂಟ್ ಥೆರೆಸಾ ಶಾಲೆ ಹಾಗೂ ದ್ವಿತೀಯ ಸ್ಥಾನವನ್ನು ತಲಪಾಡಿಯ ಶಾರದಾ ವಿದ್ಯಾನಿಕೇತನ ಶಾಲೆ ಪಡೆದುಕೊಂಡಿದೆ . ಅದೇ ರೀತಿ ೧೪ ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಮಂಗಳೂರಿನ ಸೈಂಟ್ ಥೆರೆಸಾ ಶಾಲೆ ಹಾಗೂ ದ್ವಿತೀಯ ಸ್ಥಾನವನ್ನು ಮಂಗಳೂರಿನ ಸೈಂಟ್ ಆಗ್ನೆಸ್ ಶಾಲೆ ಪಡೆದುಕೊಂಡಿದೆ .ಅದೇ ರೀತಿ ೧೭ ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನುಎಂ.ಆರ್.ಪಿ.ಎಲ್ ದೆಹಲಿ ಪಬ್ಲಿಕ್ ಸ್ಕೂಲ್ ಹಾಗೂ ದ್ವಿತೀಯ ಸ್ಥಾನವನ್ನು ಬಂಟ್ವಾಳದ ಬಿ.ಆರ್.ಎಂ.ಪಿ ಪಡೆದುಕೊಂಡಿದೆ. ಇನ್ನು ವಿಜೇತರಿಗೆ ಬಹುಮಾನವನ್ನು ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಿಟಿಎ ಶಾಲೆ ಮತ್ತು ಎಂ.ಆರ್.ಪಿ.ಎಲ್ ಎಂಪ್ಲಾಯಿಸ್ ಕ್ಲಬ್ ಅಧ್ಯಕ್ಷ ಗೋಪಿರಾಮ್ ನೀಡಿ ಗೌರವಿಸಿದ್ದಾರೆ . ಪಿಟಿಎ ಉಪಾಧ್ಯಕ್ಷೆ ವಿನುತಾ , ಎಂ.ಆರ್.ಪಿ.ಎಲ್ ಎಂಪ್ಲಾಯಿಸ್ ಕ್ಲಬ್ ಕಾರ್ಯದರ್ಶಿ ನರಸಿಂಹ ಮೂರ್ತಿ , ಶಾಲೆ ಪ್ರಾಂಶುಪಾಲ ಪಿ.ಎಸ್ ಚಂದ್ರಶೇಖರ್ , ದೈಹಿಕ ಶಿಕ್ಷಣ ಶಿಕ್ಷಕರಾದ ಸುನೀತಾ ರೋಡ್ರಿಗ್ರಸ್ , ಲೋಕೇಶ್ ದೇವಾಡಿಗ ಮುಖ್ಯ ರೆಫ್ರಿ ಅಶ್ವಿನ್ ಪಡುಕೋಣೆ ಶಾಲಾ ಸಮಿತಿ ಸದಸ್ಯರು , ಸಂಘಟನಾ ಸಮಿತಿ ಸದಸ್ಯ ಗಣೇಶ್ ಕಾಮತ್ , ವೇನಿಷಾ ಮಸ್ಕರೇನಸ್ , ಶೋಭಿತಾ ಎಸ್ .ಶಾಮ್ , ಕ್ರೀಡಾ ನಾಯಕ ಭವನ್ ಡಿ. ಜೆ, ಶಾಲಾ ವಿದ್ಯಾರ್ಥಿ ನಾಯಕ ಶಿವಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ನಾಯಕಿ ಜೋತ್ನ್ಸಾ ಮುನ್ನಾರ್ , ಹಾಗೂ ಅಚಲ್ ಕಾರ್ಯಕ್ರಮ ನಿರೂಪಿಸಿದ್ದಾರೆ .

 

Be the first to comment

Leave a Reply

Your email address will not be published.


*