ಡೈಮಂಡ್ ಇಂಟರ್‌ನ್ಯಾಶನಲ್ ಸ್ಕೂಲ್ ಗೆ ಎರಡು ಪ್ರಶಸ್ತಿ

ಬಿ.ಸಿ.ರೋಡ್‌ನ ಡೈಮಂಡ್ ಇಂಟರ್‌ನ್ಯಾಶನಲ್ ಸ್ಕೂಲ್ ಪ್ರಸಕ್ತ ಸಾಲಿನ  “ಇಂಡಿಯನ್ ಸ್ಕೂಲ್ ಅವಾರ್ಡ್” ನಲ್ಲಿ ಎರಡು ಪ್ರಶಸ್ತಿಗೆ ಪಾತ್ರವಾಗಿದೆ. ಪತ್ಯೇತರ ಚಟುವಟಿಕೆಗಳನ್ನು ಉತ್ತೇಜಿಸುವಲ್ಲಿ ಕೈಗೊಂಡ ಕ್ರಮ ಹಾಗೂ ಶಿಕ್ಷಣದಲ್ಲಿ ಕಲೆಯನ್ನು ಅಳವಡಿಕೆಯಲ್ಲಿ ಉತ್ತಮ ನಿರ್ವಹಣೆಗಾಗಿ ಈ ಎರಡು ಪ್ರಶಸ್ತಿ ಲಭಿಸಿದೆ. ಗುರುಗ್ರಾಮ್ ನಲ್ಲಿರುವ ಬಿಎಂಎಲ್ ಮುಂಜಾಲ್ ವಿಶ್ವವಿದ್ಯಾನಿಲಯದಲ್ಲಿ ಸೆ. 10ರಂದು ಜರುಗಿದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಧಾನ ಮಂತ್ರಿಯ ವಿಶೇಷ ಸಲಹೆಗಾರ ಡಾ!! ದೀಪಕ್ ವ್ರೊಹಾ ಹಾಗೂ ಬೈನ್ ವಂಡರ್ಸ್ನ ಸ್ಥಾಪಕ ಮನೀಶ್ ನಾಯ್ಡು ಪ್ರದಾನ ಮಾಡಿದರು. ಡೈಮಂಡ್ ಇಂಟರ್‌ನ್ಯಾಶನಲ್ ಸ್ಕೂಲ್ ಅಧ್ಯಕ್ಷ ಸಲೀಂ ಅಲ್ತಾಫ್ ಫರಂಗಿಪೇಟೆ ಹಾಗೂ ಸನಾ ಅಲ್ತಾಫ್ ಪ್ರಶಸ್ತಿ ಸ್ವೀಕರಿಸಿದರು.

Be the first to comment

Leave a Reply

Your email address will not be published.


*