ಹುಟ್ಟು ಹಬ್ಬದ ಸಂಭ್ರಮದಲ್ಲಿರೋ ಮಾಜಿ ಸಚಿವ ರೈ

ಇಂದು ಮಾಜಿ ಸಚಿವ ಬಿ. ರಮಾನಾಥ ರೈಯವರಿಗೆ ಹುಟ್ಟುಹಬ್ಬದ ಸಂಭ್ರಮ.. ೬೭ ನೇ ವರ್ಷಕ್ಕೆ ಕಾಲಿಟ್ಟಿರುವ ಬಿ. ರಮಾನಾಥ ರೈ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ .ಅಂದ ಹಾಗೆ ಸೆ.೧೩ .೧೯೫೨ರಂದು ಜನಿಸಿದ ಇವರು ಬಾಲ್ಯದಿಂದಲೇ ಬಲು ಚತುರನಾಗಿದ್ದರು. ಇನ್ನು ಬಂಟ್ವಾಳ ಕ್ಷೇತ್ರದಲ್ಲೇ ನೆಲೆಸಿರುವ ಇವರು ಬೆಲ್ಲಿಪ್ಪಾಡಿ ರಮಾನಾಥ ರೈ ಅಂತಲೇ ಖ್ಯಾತಿ ಹೊಂದಿದ್ದಾರೆ ಸುಮಾರು ೪೫ ವರ್ಷಗಳ ರಾಜಕೀಯ ರಂಗದಲ್ಲಿ ಕೆಲಸ ನಿರ್ವಹಿಸುತ್ತಿದ್ದು ಬಂಟ್ವಾಳ ಕ್ಷೇತ್ರದಲ್ಲೇ ಅಭ್ಯರ್ಥಿಯಾಗಿ ನಿಂತು ಶಾಸಕನಾಗಿ ಹೊರ ಬಂದಿದ್ದಾರೆ . ಮಾತ್ರವಲ್ಲ ತಮ್ಮ ಉತ್ತಮ ಕೆಲಸಗಳ ಮೂಲಕ ಜನಮನ್ನಣೆ ಗಳಿಸಿರುವ ರೈ , ಸಚಿವನಾಗಿಯೂ ಕೆಲಸ ಮಾಡಿದ್ದಾರೆ . ಅರಣ್ಯ ಸಚಿವರಾಗಿ ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ನಿರ್ವಹಿಸಿದ ಇವರು ತಮ್ಮ ಆಡಳಿತಾವಧಿಯಲ್ಲಿ ಉತ್ತಮ ಕೆಲಸವನ್ನು ಮಾಡಿ ಜಿಲ್ಲೆಯನ್ನು ಅಭಿವೃದ್ದಿ ಪಥದಲ್ಲಿ ಕೊಂಡೊಯ್ದಿದ್ದಾರೆ . ಮಾತ್ರವಲ್ಲ ಇದೀಗ ಮಾಜಿ ಸಚಿವನಾಗಿದ್ದರು ತಮ್ಮ ಬಂಟ್ವಾಳ ಕ್ಷೇತ್ರದ ಜನತೆಗಾಗಿ ಹಗಲಿರುಳು ಜನಸೇವೆಯನ್ನು ಮಾಡುತ್ತಿರುವುದು ಬಹಳ ಖುಷಿಯ ಹಾಗೂ ಹೆಮ್ಮೆಯ ಸಂಗತಿ . ಒಂದೆಡೆ ಜವಬ್ದಾರಿಯುತ ಶಾಸಕ ಇದ್ದರು ಅಲ್ಲಿ ಯಾವುದೇ ಜನರಿಗೆ ಕೆಲಸ ನಡೆದೆ ಬರೀ ಮನವಿ ಸಲ್ಲಿಸುವ ಕೆಲಸದಲ್ಲೇ ಶಾಸಕರು ಕಾಲ ಕಳೆಯತ್ತಿರುವ ಸಂದರ್ಭದಲ್ಲಿ ಮಾಜಿ ಸಚಿವ ರೈ ಸ್ವತ: ಕಷ್ಟದಲ್ಲಿರುವ ಜನರ ಬಲಿ ತೆರಳಿ ಅವರ ಕಷ್ಟಗಳನ್ನು ಅರಿತು ಪರಿಹಾರ ನೀಡುತ್ತಿರುವುದು ಇವರ ಕಾರ್ಯಪ್ರವೃತೆಯನ್ನು ಎತ್ತಿ ತೋರಿಸುತ್ತಿದೆ. ಒಟ್ಟಾರೆ ೬೭ ವರ್ಷದಲ್ಲೂ ಬಹಳ ಉತ್ಸುಕರಾಗಿ ರಾಜಕೀಯ ರಂಗದಲ್ಲಿ ತೊಡಗಿರುವ ಇವರ ಕಾರ್ಯ ನಿಜಕ್ಕೂ ಉಳಿದ ರಾಜಕೀಯ ನಾಯಕರಿಗೆ ಮಾದರಿ, ಮತ್ತೊಮ್ಮೆ ಮಾಜಿ ಸಚಿವ ರಮಾನಾಥ ರೈಯವರಿಗೆ ಹುಟ್ಟುಹಬ್ಬದ ಶುಭಾಷಯಗಳು .

 

Be the first to comment

Leave a Reply

Your email address will not be published.


*