ಹೈಕಮಾಂಡ್ ತಲುಪಿದ ಕಾಂಗ್ರೆಸ್ ನಾಯಕರ ಹೊಸ ಬೇಡಿಕೆ

೨೦೧೩ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ್ರೂ ೨೦೧೮ರ ವಿಧಾನ ಸಭಾ ಚುನಾವಣೆಯಲ್ಲಿ ನಿರೀಕ್ಷೆಯಷ್ಟು ಯಶಸ್ಸು ಕಾಂಗ್ರೆಸ್ ಪಕ್ಷಕ್ಕೆ ಸಿಗಲಿಲ್ಲ . ಇನ್ನು ಪಕ್ಷದ ಸೋಲಿಗೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಕಾರಣ ಎಂದು ಹಲವು ನಾಯಕರು ಆರೋಪ ಮಾಡಿದ್ದು ಮೈತ್ರಿ ಸರ್ಕಾರ ಸಂದರ್ಭದಲ್ಲಿ ಈ ಮಾತುಗಳು ಕೊಂಚ ಕಡಿಮೆಯಾಗಿತ್ತು. ಇದೀಗ ಮೈತ್ರಿ ಸರ್ಕಾರ ಬಿದ್ದ ಹಿನ್ನಲೆಯಲ್ಲಿ ಮತ್ತೆ ವಿವಾದ ಭುಗಿಲೆದ್ದಿದ್ದು , ಕಾಂಗ್ರೆಸ್ ನಾಯಕರ ದಂಡು ದೆಹಲಿಯತ್ತ ತಮ್ಮ ಪಯಣ ಬೆಳಿಸಿದೆ.ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ , ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಸೇರಿದಂತೆ ಹಲವು ನಾಯಕರು ದೆಹಲಿಯಲ್ಲಿ ಬೀಡುಬಿಟ್ಟಿದ್ದು, ಇಂದು ಸಂಜೆ ಸಿದ್ದರಾಮಯ್ಯ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಭೇಟಿ ಮಾಡಲಿದ್ದಾರೆ . ವಿರೋಧ ಪಕ್ಷದ ನಾಯಕನ ಆಯ್ಕೆ ಕೆಪಿಸಿಸಿ ಪದಾಧಿಕಾರಿಗಳ ನೇಮಕದ ಜೊತೆ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಬದಲಾವಣೆ ಬೇಡಿಕೆ ಇಡಲಾಗಿದೆ.

Be the first to comment

Leave a Reply

Your email address will not be published.


*