ಸಂಸದ ನಳಿನ್ ಕುಮಾರ್ ಕಟೀಲ್ ಲೋಕಸಭಾ ಅಭ್ಯರ್ಥಿಯಾಗಲು ಅರ್ಹತೆ ಹೊಂದಿಲ್ಲ ,ವಾಗ್ದಾಳಿ ನಡೆಸಿದ ಮಾಜಿ ಸಚಿವ ರೈ

ಇಂದು ಮಾಜಿ ಸಚಿವ ಬಿ ರಮಾನಾಥ ರೈ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಜರುಗಿದೆ .ಬಂಟ್ವಾಳ ತಾಲ್ಲೂಕಿನ ಮೆಲ್ಕಾರ್ನಿಂದ ಬಿಸಿ ರೋಡ್ವರೆಗೆ ಪ್ರತಿಭಟನೆ ಜರುಗಿದ್ದು ಬಂಟ್ವಾಳ ತಾಲ್ಲೂಕಿನ ತಹಶೀಲ್ದಾರ ಟಿ ಶ್ರೀಮತಿ ರಶ್ಮಿ ಅವರಿಗೆ ಕೊನೆಗೆ ಮನವಿಯನ್ನು ಸಲ್ಲಿಸಲಾಗಿದೆ .ಅಂದಹಾಗೆ ರೈ ನೇತೃತ್ವದಲ್ಲಿ ಜರಗಿದ ಪ್ರತಿಭಟನೆಯಲ್ಲಿ ರಾಷ್ಟ್ರೀಯ ಹೆದ್ದಾರಿ ದುರಸ್ತಿಗೊಳಿಸಿ ಜನ ಪ್ರಾಣ ಉಳಿಸಿ ಎಂಬ ಘೋಷ ವಾಕ್ಯದೊಂದಿಗೆ ಪಾದಯಾತ್ರೆ ಜರುಗಿದ್ದು ಹಳ್ಳ ಗುಂಡಿಗಳಿದ್ದ ರಸ್ತೆಯನ್ನು ದುರಸ್ತಿಗೊಳಿಸಿ ಜನರ ಪ್ರಾಣವನ್ನು ಉಳಿಸಬೇಕಾಗಿದೆ ಎಂಬ ಮಾತನ್ನು ತಿಳಿಸಿದರು.ಇನ್ನು ಇದೇ ಸಂದರ್ಭದಲ್ಲಿ ಲೋಕಸಭಾ ಅಭ್ಯರ್ಥಿ ನಳೀನ್ ಕುಮಾರ್ ಕಟೀಲ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಬಾಳೆ ಗಿಡಕ್ಕೆ ಸುತ್ತಿ ಗುಂಡಿಗಳು ಇದ್ದ ಸ್ಥಳದಲ್ಲಿ ನೆಡಲಾಯಿತು .ಇನ್ನು ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ರೈ ಇನ್ನಾದ್ರೂ ಜೀವ ಉಳಿಸುವ ಕೆಲಸವನ್ನು ಕೇಂದ್ರ ಸರಕಾರ ಮಾಡಬೇಕಾಗಿದೆ ಆಸ್ಕರ್ ಫರ್ನಾಂಡೀಸ್ ಇದ್ದ ಸಂದರ್ಭದಲ್ಲಿ ಉತ್ತಮ ರೋಡ್ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದರೂ ಆದ್ರೆ ಬಿಜೆಪಿಯವರು ಕೇವಲ ನಾಲ್ಕು ಫ್ಲಾಗ್ ಗಳನ್ನು ಹಿಡಿದುಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ .ಇದೇನಾ ಇವರ ಕೆಲಸ ಅಂತ ಪ್ರಶ್ನಿಸಿದ್ದಾರೆ .ಮಾತ್ರವಲ್ಲ ಚುನಾಯಿತ ಪ್ರತಿನಿಧಿಯಕೆಲಸ ಸಿಲ್ಲಿ ಅನ್ನಿಸುತ್ತಿದೆ ಏನು ಲೋಕಸಭಾ ಅಭ್ಯರ್ಥಿಯಾಗಲು ಇವರು ಅರ್ಹತೆಯನ್ನು ಹೊಂದಿಲ್ಲ ಅಂತ ನೇರವಾಗಿ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ .ಇದರ ಜೊತೆ ಮಾತನಾಡಿದ ರೈ ಭೂಸ್ವಾಧೀನ ಸರಿ ಮಾಡಲು ಇವರು ರಾಜಕೀಯಕ್ಕೆ ಬಂದಿಲ್ಲ ಎಂಬ ಮಾತನ್ನು ಬಿಜೆಪಿಗರು ತಿಳಿಸಿದ್ರು ಅವತ್ತು ಅದಕ್ಕೆ ಸಂಬಂಧಪಟ್ಟಂತೆ ರಾಜೀನಾಮೆ ನೀಡುತ್ತೇನೆ ಅಂತ ತಿಳಿಸಿದ್ದೆ ಈವಾಗ್ಲೂ ಅದನ್ನೇ ಹೇಳುತ್ತೇನೆ ಎಂಬ ಮಾತನ್ನು ಹೇಳಿದ್ದಾರೆ .ಇನ್ನು ಈ ಪ್ರತಿಭಟನಾ ಪಾದಯಾತ್ರೆಯಲ್ಲಿ ಕಾಂಗ್ರೆಸ್ನ ನಾಯಕರು ಸೇರಿದಂತೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು ಜಿಲ್ಲಾ ಪಂಚಾಯತ್ ಸದಸ್ಯರು ಭಾಗಿಯಾಗಿದ್ದರು .

Be the first to comment

Leave a Reply

Your email address will not be published.


*