ಚುನಾವಣೆಗೋಸ್ಕರ ಬಿಜೆಪಿ ಸರ್ಕಾರ ಇದೆ ಜನರಿಗೋಸ್ಕರ ಇಲ್ಲ -ಮಾಜಿ ಸಚಿವ ರೈ

ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಸಚಿವ ರಮಾನಾಥ ರೈ ನೇತೃತ್ವದಲ್ಲಿ ಸುದ್ದಿಗೋಷ್ಠಿ ಜರುಗಿದೆ.ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ರೈ ಬಿಜೆಪಿ ಸರಕಾರ ಚುನಾವಣೆಗೋಸ್ಕರ ಇದೇ ಜನಪರ ಕೆಲಸಕ್ಕೆ ಇಲ್ಲ ಎಂಬ ಮಾತನ್ನು ತಿಳಿಸಿದರು .ದೇಶದ ಜನ ಅತಂತ್ರ ಸ್ಥಿತಿಯಲ್ಲಿದ್ದಾರೆ ಉದ್ಯೋಗವಿಲ್ಲದೆ ಯುವಜನಾಂಗ ಪರದಾಡುತ್ತಿದೆ .ಆದರೂ ಕೇಂದ್ರ ಸರಕಾರ ಇದರ ಗೋಜಿಗೆ ಹೋಗುತ್ತಿಲ್ಲ ಅಂತ ತಿಳಿಸಿದರು .ಇನ್ನು ಸದ್ಯದಲ್ಲೇ ರಾಜ್ಯದಲ್ಲಿ ಉಪ ಚುನಾವಣೆ ನಡೆಯಲಿದ್ದು ಅದರ ತಯಾರಿಗಳನ್ನು ಈಗಾಗಲೇ ಸರ್ಕಾರ ನಡೆಸುತ್ತಿದೆ ಅಂತ ತಿಳಿಸಿದರು ಇನ್ನು ಬಿಜೆಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಮಾಜಿ ಸಚಿವ ರೈ ಜನರೇ ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎನ್ನುವ ಮಾತನ್ನು ಕೂಡ ತಿಳಿಸಿದ್ದಾರೆ

 

Be the first to comment

Leave a Reply

Your email address will not be published.


*